BANTWAL
ಪ್ರೀತಿಯ ನಾಯಿ ಜೊತೆ ನೇತ್ರಾವತಿ ನದಿಗೆ ಹಾರಿದ ಮೂವರ ಆತ್ಮಹತ್ಯೆ
ಪ್ರೀತಿಯ ನಾಯಿ ಜೊತೆ ನೇತ್ರಾವತಿ ನದಿಗೆ ಹಾರಿದ ಮೂವರ ಆತ್ಮಹತ್ಯೆ
ಬಂಟ್ವಾಳ ಸೆಪ್ಟೆಂಬರ್ 29 : ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿದವರ ಪೈಕಿ ಓರ್ವ ಮಹಿಳೆಯ ಮೃತ ದೇಹ ದೊರೆತಿದ್ದು ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮೃತಳನ್ನು 56 ವರ್ಷದ ಕವಿತಾ ಮದ್ದಣ್ಣ ಎಂದು ಗುರುತ್ತಿಸಲಾಗಿದೆ. ಇನ್ನು ಅವರ ಮಕ್ಕಳಲ್ಲಿ ಕೌಶಿಕ್ ಮತ್ತು ಮಗಳು ಕಲ್ಪಿತಾ ಮದ್ದಣ್ಣ ಅವರುಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.ಮೈಸೂರಿ ವಿಜಯನಗರ ಲೇಔಟ್‌ನಲ್ಲಿ ವಾಸವಿದ್ದ ಕವಿತಾ ಅವರ ಪತಿ ಕಿಸನ್ ಮಂದಣ್ಣ ಅವರು ಕೆಲ ದಿನಗಳ ಹಿಂದೆಯಷ್ಟೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರ ಸಾವಿನಿಂದ ಖಿನ್ನತೆಗೆ ಜಾರಿದ ಕುಟುಂಬದ ಸದಸ್ಯರು ತಮ್ಮ ಸಂಬಂಧಕರಿಗೆ ಪತ್ರ ಬರೆದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು ಎಂದು ಹೇಳಲಾಗಿದೆ.
ಮೂಲತ ಕೊಡಗು ಜಿಲ್ಲೆಯ ವಿರಾಜಪೇಟೆ ಕಡಂಗಳ ಬಳ್ಳಚಂಡ ಮೂಲದವರಾದ ಇವರು ಮೈಸೂರಿನಲ್ಲಿ ವಾಸವಿದ್ದರು. ಕಿಸನ್ ಮಂದಣ್ಣ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ನಿವೃತ್ತಿ ಹೊಂದಿದ್ದರು. ಪುತ್ರ ಕೌಶಿಕ್ ಸಹ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಈಚೆಗಷ್ಟೆ ಕೆಲಸ ಬಿಟ್ಟಿದ್ದರು. ಸಂಬಂಧಿಕರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇವರು ಇದ್ದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮನೆ ಯಜಮಾನನ ಸಾವಿನಿಂದ ಶಾಕ್ ಅದ ಈ ಕುಟುಂಬ ಪತ್ರವನ್ನು ಬರೆದಿಟ್ಟು ಮಂಗಳೂರು ಕಡೆಗೆ ಅಗಮಿಸಿತ್ತು.
ರಾತ್ರಿ ಸುಮಾರು 10.30 ರ ವೇಳೆ ಈ ಕುಟುಂಬ ಬಂಟ್ವಾಳಕ್ಕೆ ಬಂದು ನೇತ್ರಾವತಿ ನದಿಯ ಸಮೀಪವಿರುವ ಹೋಟೋಲೊಂದರ ಪಕ್ಕ ತಮ್ಮ ಇಕೋ ಕಾರು ನಿಲ್ಲಿಸಿ ನದಿಯ ಕಡೆಗೆ ನಡೆದುಕೊಂಡು ಬಂದಿದ್ದಾರೆ.ಅಲ್ಲದೆ ಜೊತೆಗೆ ಅವರ ಪ್ರೀತಿಯ ನಾಯಿಯನ್ನು ಕರೆದುಕೊಂಡು ಬಂದಿದ್ದಾರೆ.
ಗಂಡನ ಸಾವಿನ ಹಿನ್ನಲೆಯಲ್ಲಿ ಸಾಯಲೆಂದೆ ನಿರ್ಣಯ ಮಾಡಿ ಬಂದ ಈ ಕುಟುಂಬ ತಾಯಿ ಜೊತೆ ಇಬ್ಬರು ಮಕ್ಕಳು ನದಿಗೆ ಹಾರಿದ್ದಾರೆ. ಕವಿತಾ ಅವರು ತನ್ನ ಪ್ರೀತಿಯ ನಾಯಿಯನ್ನು ಹಿಡಿದುಕೊಂಡು ಜೊತೆಯಾಗಿ ಹಾರಿದ್ದರು.ಇವರು ಹಾರಿದಾಗ ಸ್ಥಳೀಯ ರಿಕ್ಷಾ ಚಾಲಕರೋರ್ವರು ನೋಡಿ ಸ್ಥಳೀಯ ಈಜುಗಾರರಲ್ಲಿ ತಿಳಿಸಿದ್ದಾರೆ.ಕೂಡಲೇ ರಕ್ಷಣೆಗೆ ಮುಂದಾದರಾದರೂ ರಾತ್ರಿ ವೇಳೆ ಯಾದ್ದರಿಂದ ಅವರ ರಕ್ಷಣೆ ಕಷ್ಟ ಸಾಧ್ಯವಾಯಿತು.
ನಾಯಿ ಜೊತೆಯಲ್ಲಿ ಹಾರಿದ ಮಹಿಳೆ ಜೀವನ್ಮರಣ ಸ್ಥಿತಿಯಲ್ಲಿ ಮುಳುಗೇಳುತ್ತಿದ್ದ ಸಂದರ್ಭದಲ್ಲಿ ನೋಡಿದ ಸ್ಥಳೀಯ ಮುಳುಗುತಜ್ಞರು ಕಾರ್ಯಪ್ರವೃತ್ತರಾಗಿದ್ದು, ಗೂಡಿನಬಳಿ ಹಳೇ ಸೇತುವೆ ಬಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಜೊತೆಗೆ ನಾಯಿಯನ್ನೂ ಸ್ಥಳೀಯರು ರಕ್ಷಿಸಿದ್ದಾರೆ. ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತುಂಬೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.ಆದರೆ ತುಂಬೆ ಆಸ್ಪತ್ರೆಯಲ್ಲಿ ಮಹಿಳೆ ರಾತ್ರಿ ಸುಮಾರು 11.45ಕ್ಕೆ ಕೊನೆಯುಸಿರೆಳೆದಿದ್ದಾರೆ. ಇನ್ನಿಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.