Connect with us

BANTWAL

ಸಂಸದ ಕೋಟ ಎದುರು ರಾಜ್ಯ ಸರಕಾರ ನಡೆಸಿಕೊಂಡ ರೀತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುಹಾಸ್ ಶೆಟ್ಟಿ ತಾಯಿ

ಬಂಟ್ವಾಳ ಮೇ 04: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿದರು. ಶಾಸಕರಾದ ರಾಜೇಶ್ ನಾಯ್ಕ್ ರವರೊಂದಿಗೆ ಭೇಟಿ ನೀಡಿದ ಸಂಸದ ಕೋಟ ಸುಹಾಸ್ ಶೆಟ್ಟಿ ಅವರ ತಂದೆ ತಾಯಿ ಮತ್ತು ಅವರ ಸಹೋದರರನ್ನು ಭೇಟಿಯಾದರು.


ಈ ಸಂದರ್ಭದಲ್ಲಿ ಅವರ ತಾಯಿ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ ಸರ್ಕಾರವು ತನ್ನ ಮಗನನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ತೋಡಿಕೊಂಡರು. ಸುಮಾರು 20 ದಿನಗಳಿಂದ ಸುಭಾಸ್ ಶೆಟ್ಟಿಯನ್ನು ಪದೇ ಪದೇ ಪರಿಶೀಲಿಸಿ ಆತನ ಕಾರು ತಪಾಸಣೆ ಮಾಡಿ ಆತನನ್ನು ನಿಶಸ್ತ್ರಗೊಳಿಸುವಂತೆ ಮಾಡಿದ್ದರು. ಯಾವುದೇ ಶಸ್ತ್ರಾಸ್ತ್ರವನ್ನು ಇಟ್ಟುಕೊಳ್ಳದ ಹಾಗೆ ಪ್ರಯಾಣಿಸುವ ಬಗ್ಗೆ ಸರ್ಕಾರವು ತನ್ನ ಮಗನನ್ನು ಕೊಲ್ಲಲು ಪರೋಕ್ಷವಾಗಿ ಸಹಕರಿಸಿದೆ. ಠಾಣೆಗೆ ಕರೆಸಿ ಯಾವುದೇ ಕಾರಣಕ್ಕೂ ಯಾವುದೇ ಶಸ್ತ್ರಾಸ್ತ್ರವನ್ನು ಇಟ್ಟುಕೊಂಡರೆ ಜೈಲಿಗೆ ಅಟ್ಟುತ್ತೇವೆ ಎಂಬ ಬೆದರಿಕೆಯನ್ನು ಪೊಲೀಸರ ಮೂಲಕ ಸರ್ಕಾರವು ಹಾಕಿತ್ತು. ಹೀಗಾಗಿ ಆತನನ್ನು ಕೊಲೆ ಮಾಡಲು ಹಂತಕರಿಗೆ ಸುಲಭವಾಯಿತು. ಕನಿಷ್ಠ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರು ಮಂಗಳೂರಿಗೆ ಬಂದಿದ್ದರೂ ಮನೆಗೆ ಬಾರದೆ ಒಂದು ಸಾಂತ್ವನ ಹೇಳುವ ಕನಿಷ್ಠ ಕೆಲಸವನ್ನು ಮಾಡಲಿಲ್ಲ. ಅದರ ಬದಲು ಮುಸ್ಲಿಂ ಮುಖಂಡರು ಹೇಳಿದಂತೆ ಸರ್ಕಾರ ಕುಣಿಯುತ್ತಿದೆ ಎಂದು ಸುಹಾಸ್ ಕುಟುಂಬಸ್ಥರು ಬೇಸರ ತೋಡಿಕೊಂಡರು.


ಎಲ್ಲಾ ಹೇಳಿಕೆಗಳನ್ನು ಗಮನಿಸಿದ ಸಂಸದರು ನಿಶ್ಚಯವಾಗಿ ಈ ಪ್ರಕರಣವನ್ನು ಎನ್ಐಎ ಗೆ ಒಳಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ದೇವದಾಸ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *