DAKSHINA KANNADA
ಸುಬ್ರಹ್ಮಣ್ಯ: ರೂಂ ಬಾಯ್ ನ್ನು ಎಳೆದು ಹಾಕಿದ ಸುಬ್ರಹ್ಮಣ್ಯದ ಆನೆ
ಕುಕ್ಕೆ ಸುಬ್ರಹ್ಮಣ್ಯ, ಜೂನ್ 26: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆ ರೂಂ ಬಾಯ್ ಒಬ್ಬರನ್ನು ಎಳೆದು ಹಾಕಿದ ಘಟನೆ ನಡೆದಿದೆ.
ಸುಬ್ರಹ್ಮಣ್ಯದ ಸವಾರಿ ಮಂಟಪದ ಹತ್ತಿರದ ಬಳಿ ದೇವಸ್ಥಾನದ ಆನೆ ಡಿ.ಕೆ.ಶಿ ಯವರನ್ನು ಸ್ವಾಗತಿಸಲು ಹೋಗುವ ಸಲುವಾಗಿ ನಿಂತಿತ್ತು. ಈ ವೇಳೆ ಒಂದಿಬ್ಬರು ಪೊಲೀಸರು ಕೂಡ ಆನೆಯ ಬಳಿಯಲ್ಲಿ ನಿಂತು ಪೋಟೋ ತೆಗೆಯಲು ಬಂದಿದ್ದರು.
ಇದೇ ವೇಳೆಗೆ ಸುಬ್ರಹ್ಮಣ್ಯದ ಲಾಡ್ಜ್ ಒಂದರ ರೂಂ ಬಾಯ್ ಆನೆಯ ಹತ್ತಿರ ಬಂದಿದ್ದು ತಕ್ಷಣ ಆನೆ ತನ್ನ ಸೊಂಡಿಲಿನಿಂದ ಎಳೆದು ಹಾಕಿರುವುದಾಗಿ ತಿಳಿದು ಬಂದಿದೆ. ರೂಂ ಬಾಯ್ ಮದ್ಯಪಾನ ಮಾಡಿರುವುದೇ ಘಟನೆ ಕಾರಣ ಎನ್ನಲಾಗಿದ್ದು ಯಾವುದೇ ತೊಂದರೆ ಆಗಿಲ್ಲ ಎನ್ನಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಗೆ ಕೆಲವೇ ಸಮಯದ ಮೊದಲು ಈ ಘಟನೆ ನಡೆದಿದೆ.
You must be logged in to post a comment Login