FILM
ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಹೃದಯಾಘಾತದಿಂದ ನಿಧನ

ಬೆಂಗಳೂರು ಡಿಸೆಂಬರ್ 27: ಕನ್ನಡದ ಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.ಚ ಅವರಿಗೆ 57 ವರ್ಷ ವಯಸ್ಸಾಗಿತ್ತು.
ಜಾಲಿ ಬಾಸ್ಟಿನ್ ಅವರು ಕೇರಳ ಮೂಲದವರಾಗಿದ್ದು 1966ರಲ್ಲಿ ಜನಿಸಿದ್ದರು. ಸುಮಾರು 900ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮೂಲತಃ ಕೇರಳದವರಾಗಿದ್ದು ಬೆಂಗಳೂರಿನ ಶಿಕ್ಷಣ ಪಡೆದು, ಡಿಪ್ಲೊಮೋ ವ್ಯಾಸಂಗ ಮುಗಿಸಿದ್ದರು. ಬೈಕ್ ಮೆಕಾನಿಕ್ ಆಗಿ ವೃತ್ತಿ ಆರಂಭಿಸಿದ್ದ ಜಾಲಿ ಬಾಸ್ಟಿನ್ ಸಿನಿಮಾ ರಂಗದಲ್ಲಿ ಸ್ಟಂಟಿಂಗ್ ಮಾಡುತ್ತಿದ್ದರು.

ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಕೈಯಲ್ಲೂ ಪೈಟ್ ಮಾಡಿಸಿದ್ದರು. ಕೇವಲ ತಮ್ಮ 17ನೇ ವಯಸ್ಸಿನಲ್ಲಿಯೇ ಸ್ಯಾಂಡಲ್ವುಡ್ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಬೈಕ್ ಚೇಸಿಂಗ್ ಡ್ಯೂಪ್ ಆಗಿ ಕೆಲಸ ಮಾಡಿದ್ದರು. ಪ್ರೇಮಲೋಕ, ಪುಟ್ನಂಜ, ಅಣ್ಣಯ್ಯ, ಶಾಂತಿ ಕ್ರಾಂತಿ, ಸೇರಿದಂತೆ ರವಿಚಂದ್ರನ್ ನಟನೆಯ ಹಲವಾರು ಸಿನಿಮಾಗಳಿಗೆ ಕೆಲಸ ಮಾಡಿ ತಮ್ಮ ಸ್ಟಂಟಿಂಗ್ ಮೂಲಕ ಫೆಮಸ್ ಆಗಿದ್ದರು. ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಬಾಸ್ಟಿನ್ ಅವರಿಗೆ ಇತ್ತು.