DAKSHINA KANNADA
ಪುತ್ತೂರು ನಗರಸಭೆ ಉಪಚುನಾವಣೆ – ಮತದಾನ ಪ್ರಾರಂಭ
ಪುತ್ತೂರು ಡಿಸೆಂಬರ್ 27: ಪುತ್ತೂರು ನಗರಸಭೆಯ ತೆರವಾದ ಎರಡು ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಇಂದು ಮತದಾನ ಪ್ರಾರಂಭವಾಗಿದೆ. ನೆಲ್ಲಿಕಟ್ಟೆ ಮತ್ತು ರಕ್ತೇಶ್ವರಿ ಎರಡೂ ಕ್ಷೇತ್ರಗಳ ಚುನಾಯಿತ ಸದಸ್ಯರು ಅಕಾಲಿಕ ಮರಣ ಹೊಂದಿದ ಕಾರಣ ಈ ಉಪ ಚುನಾವಣೆ ನಡೆಯುತ್ತಿದೆ.
ಬಿಜೆಪಿಗೆ ಪರ್ಯಾಯವಾಗಿ ಪ್ರಾರಂಭವಾದ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಈ ಬಾರಿ ಕಣಕ್ಕಿಳಿದಿದ್ದು, ಈ ಹಿನ್ನಲೆ ಏರ್ಪಟ್ಟಿದೆ.
ರಕ್ತೇಶ್ವರಿ ವಾರ್ಡ್ ನಲ್ಲಿ 1300 ಮತಗಳು, ನೆಲ್ಲಿಕಟ್ಟೆ ವಾರ್ಡ್ ನಲ್ಲಿ 1700 ಮತಗಳು ಇದ್ದು, ಬೆಳಿಗ್ಗಿನಿಂದಲೇ ಬಿರುಸಿನಿಂದ ಮತದಾನ ನಡೆಯುತ್ತಿದೆ.