DAKSHINA KANNADA
ಸುಳ್ಯ – ಬಾಲಕನ ಮರ್ಮಾಂಗ ಹಿಡಿದೆಳೆದ ಸಹಪಾಠಿ ವಿಧ್ಯಾರ್ಥಿಗಳು -ಆಸ್ಪತ್ರೆಗೆ ದಾಖಲು
ಸುಳ್ಯ ಸೆಪ್ಟೆಂಬರ್ 22: ಸುಳ್ಯ ಹಾಸ್ಟೆಲ್‌ನಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ ಬಾಲಕನೊಬ್ಬನ ಮರ್ಮಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದ ಕಾರಣ ಬಾಲಕ ಮರ್ಮಾಂಗಕ್ಕೆ ಗಂಭೀರ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಸಂಪಾಜೆ ಹಾಸ್ಟೆಸ್ ನಲ್ಲಿ ನಡೆದಿದೆ . ಇದೀಗ ಬಾಲಕನಿಗೆ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಸಂಪಾಜೆಯ ಆಲಡ್ಕ ನಿವಾಸಿಯಾಗಿರುವ 12 ವರ್ಷ ವಯಸಿನ ಬಾಲಕ ಕಳೆದ ಕೆಲ ಸಮಯಗಳಿಂದ ಕೊಡಗು ಸಂಪಾಜೆಯ ಹಾಸ್ಟೆಲ್‌ನಲ್ಲಿದ್ದು ಶಾಲೆಗೆ ಹೋಗುತ್ತಿದ್ದ. ಕೆಲವು ದಿನಗಳ ಹಿಂದೆ (ಸೆಪ್ಟೆಂಬರ್ . 14) ಹಾಸ್ಟೆಲ್‌ನಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಮರ್ಮಾಂಗವನ್ನು ಹಿಡಿದೆಳೆದಿದ್ದರು. ಬಾಲಕ ಬಳಿಕ ಮೂತ್ರ ವಿಸರ್ಜನೆ ಮಾಡುವ ವೇಳೆ ನೋವಾಗುತ್ತಿದ್ದ ಕಾರಣ ಮನೆಗೆ ಬಂದಿದ್ದನೆನ್ನಲಾಗಿದೆ.
ಮೊದಲು ಯಾರೊಡನೆಯೂ ವಿಷಯ ತಿಳಿಸಿರಲಿಲ್ಲ. ಮರ್ಮಾಂಗ ಬಾತುಕೊಂಡಿದ್ದರಿಂದ ತಾಯಿಗೆ ಹೇಳಿದ್ದಾನೆ. ಬಳಿಕ ಮನೆಯವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ದಾಖಲಿಸಲಾಯಿತೆಂದು ತಿಳಿದುಬಂದಿದೆ. ಅಲ್ಲಿ ಚಿಕಿತ್ಸೆ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ. ಸಂಪಾಜೆ ಪೋಲೀಸ್ ಹೊರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login