BELTHANGADI
ಚಾರ್ಮಾಡಿ ಯಲ್ಲಿ ವಿದ್ಯಾರ್ಥಿಗಳ ಗೂಂಡಾಗಿರಿ: ಗೂಂಡಾಗಿರಿ ನಡೆದರೂ ಸುಮ್ಮನಾದ ಪೊಲೀಸರು

ಬೆಳ್ತಂಗಡಿ, ಜೂನ್ 18: ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಗೂಂಡಾಗಿರಿ ನಡೆಸಿದ್ದು, ಪೊಲೀಸರ ಎದುರೇ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆದ ಘಟನೆ ನಡೆದಿದೆ.
ಉಜಿರೆಯಿಂದ ಚಾರ್ಮಾಡಿ ಗೆ ಬಸ್ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಗುಂಪೊಂದು, ಚಾರ್ಮಾಡಿ ಬಳಿ ಬಸ್ ನಿಲ್ಲಿಸಲು ಸೂಚಿಸಿದ್ದಾರೆ, ಆದರೆ ವೇಗದೂತ ಬಸ್ ಆಗಿರೋದರಿಂದ ಸಿಕ್ಕಸಿಕ್ಕಲ್ಲಿ ಬಸ್ ನಿಲ್ಲಿಸಲು ಸಾಧ್ಯವಿಲ್ಲ ಎಂದು ಬಸ್ ಕಂಡೆಕ್ಟರ್ ಹೇಳಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳು ಮತ್ತು ಕಂಡೆಕ್ಟರ್ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭ ಕಂಡೆಕ್ಟರ್ ಮಾತಿಗೆ ಬಸ್ ನಲ್ಲಿದ್ದ ಪ್ರಯಾಣಿಕರು ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಬೆಂಬಲ ಸೂಚಿಸಿ ಪ್ರಯಾಣಿಕನ ಮೇಲೆ ವಿದ್ಯಾರ್ಥಿಗಳು ಮುಗಿಬಿದ್ದಿದ್ದರೆ. ಮಹಿಳೆಯರ ಎದುರೇ ಪ್ರಯಾಣಿಕನಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.
ಅಷೇ ಅಲ್ಲದೇ ವಿದ್ಯಾರ್ಥಿಗಳು ಬೇರೆ ಯುವಕರನ್ನು ಕರೆಸಿ ಬಸ್ ಅಡ್ಡ ಹಾಕಿ ದಾಂಧಲೆ ಮೆರೆದಿದ್ದಾರೆ. ಪೊಲೀಸರ ಎದುರೇ ವಿದ್ಯಾರ್ಥಿಗಳು ದಾಂಧಲೆ ಮಾಡಿದ್ದಾರೆ. ವಿದ್ಯಾರ್ಥಿಗಳ ಗೂಂಡಾಗಿರಿ ದೃಶ್ಯವನ್ನು ಪ್ರಯಾಣಿಕರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಘಟನೆಯ ಕುರಿತು ಈ ವರೆಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.