LATEST NEWS
ಖರ್ಚಿಗೆ ಹಣ ಕೊಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿ

ಮಂಗಳೂರು ಅಗಸ್ಟ್ 03 :ಕಾಲೇಜಿಗೆ ಹೋಗುವ ವೇಳೆ ಮನೆಯವರು ಖರ್ಚಿಗೆ ಹಣ ನೀಡಲಿಲ್ಲ ಎಂದು ವಿಧ್ಯಾರ್ಥಿಯೊಬ್ಬ ಆತ್ಮಹತ್ಯೆ ಶರಣಾದ ಘಟನೆ ಕುತ್ತಾರ್ ಸುಭಾಷನಗರದಲ್ಲಿ ನಡೆದಿದೆ.
ಮೃತ ವಿಧ್ಯಾರ್ಥಿಯನ್ನು ಭಾಸ್ಕರ್ ಪೂಜಾರಿ ಮತ್ತು ಧಾಕ್ಷಾಯಿಣಿ ಎಂಬವರ 17 ವರ್ಷ ವಯಸ್ಸಿನ ಸುಶಾಂತ್.
ಈತ ಪ್ರಥಮ ಪಿಯುಸಿಯನ್ನು ಕಪಿತಾನಿಯೋ ದಲ್ಲಿ ಮುಗಿಸಿದ್ದ ಮಗ ನಗರದ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಮಾಡುವ ಆಸಕ್ತಿ ವಹಿಸಿದ್ದರಿಂದ ಪೋಷಕರು ಸೇರಿಸಿದ್ದರು. ಬುಧವಾರ 500 ರೂ ಹಣ ಕೊಟ್ಟು ಕಾಲೇಜಿಗೆ ಮಗನನ್ನು ಕಳುಹಿಸಿದ್ದರು. ಗುರುವಾರ ಸಹ ಬೆಳಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ 500 ರೂ. ಕೊಡುವಂತೆ ಕೇಳಿದಾಗ ಪೋಷಕರು ಕೊಟ್ಟಿಲ್ಲ. ಇದರಿಂದ ಕೋಪಗೊಂಡು ಮನೆಯಲ್ಲೇ ಉಳಿದುಕೊಂಡ ಮಗ ತಂದೆ ಮನೆ ಹೊರಗಡೆ ಹಾಗೂ ತಾಯಿ ಅಡುಗೆ ಕೋಣೆಯಲ್ಲೇ ಇದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಡುಪಿಯ ಪ್ರತಿಭಟನಾ ಸಭೆಯಲ್ಲಿ ಶರಣ್ ಪಂಪ್ವೆಲ್ ಹೇಳಿಕೆ
