Connect with us

    DAKSHINA KANNADA

    ಸಾಲದಿಂದ ಮನನೊಂದು ವಿದ್ಯಾರ್ಥಿ ನೇಣಿಗೆ ಶರಣು

    ಉಳ್ಳಾಲ, ಜೂನ್ 17: ಉಳ್ಳಾಲ ಠಾಣಾ ವ್ಯಾಪ್ತಿಯ ಬಗಂಬಿಲ ಎಂಬಲ್ಲಿ ಕಾಲೇಜು ವಿದ್ಯಾರ್ಥಿಯೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

    ಕುಂಪಲದ ಬಗಂಬಿಲ ನಿವಾಸಿ, ಮಂಗಳೂರು ಖಾಸಗಿ‌ ಕಾಲೇಜಿ‌ನ ದ್ವಿತೀಯ ಬಿಬಿಎ ವಿದ್ಯಾರ್ಥಿ ಹರ್ದೀಪ್ (20) ಮೃತ ವಿದ್ಯಾರ್ಥಿ. ಈತ ಗುರುವಾರ ಬಗಂಬಿಲದ ಮನೆಗೆ ಬಂದಿದ್ದು, ಮನೆಯಲ್ಲಿ ತಾಯಿ ಮತ್ತು ಮಗ ವಾಸವಾಗಿದ್ದರು.

    ತಾಯಿಗೆ ತುಂಬಾ ಸಾಲ ಇರುವ ಬಗ್ಗೆ ಅರಿತ ವಿದ್ಯಾರ್ಥಿ ಹರ್ಷದೀಪ್‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply