LATEST NEWS
ಮೂಡಬಿದಿರೆ – ಕಾಲೇಜು ತರಗತಿಗೆ ನುಗ್ಗಿ ವಿಧ್ಯಾರ್ಥಿನಿಗೆ ಕತ್ತರಿಯಿಂದ ಇರಿತ
ಮೂಡಬಿದಿರೆ ಅಗಸ್ಟ್ 13: ಯುವಕನೊಬ್ಬ ಕಾಲೇಜಿನ ತರಗತಿಗೆ ನುಗ್ಗಿ ವಿಧ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಘಟನೆ ಮೂಡಬಿದಿರೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ.
ಆರೋಪಿ ತುಮಕೂರು ಮೂಲದ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಈ ಹಿಂದೆ ಇದೇ ಕಾಲೇಜಿನಲ್ಲಿ ಓದುತ್ತಿದ್ದು ಆನಂತರ ಕಾಲೇಜು ಬಿಟ್ಟು ಊರಿಗೆ ಹೋಗಿದ್ದ. ತುಮಕೂರು ಮೂಲದ ಆತನಿಗೆ ಪರಿಚಯದ ಮತ್ತು ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಗೆ ತರಗತಿ ಒಳಗಡೆ ಬಂದು ಕತ್ತರಿಯಿಂದ ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಕೂಡಲೇ ಇತರ ವಿದ್ಯಾರ್ಥಿಗಳು ಆತನನ್ನು ಹಿಡಿದಿದ್ದು ಮೂಡುಬಿದ್ರೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಘಟನೆಯಲ್ಲಿ ಯುವತಿ ಮುಖ ಮತ್ತು ಕುತ್ತಿಗೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದು ಮೂಡುಬಿದ್ರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
You must be logged in to post a comment Login