LATEST NEWS
ಬಸ್ ನಲ್ಲಿ ಕಾಲೇಜಿಗೆ ತೆರಳುತಿದ್ದ ಇಬ್ಬರು ವಿಧ್ಯಾರ್ಥಿಗಳ ಮೇಲೆ ಹಲ್ಲೆ

ಬಸ್ ನಲ್ಲಿ ಕಾಲೇಜಿಗೆ ತೆರಳುತಿದ್ದ ಇಬ್ಬರು ವಿಧ್ಯಾರ್ಥಿಗಳ ಮೇಲೆ ಹಲ್ಲೆ
ಉಳ್ಳಾಲ ಫೆಬ್ರವರಿ 17: ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಇಬ್ಬರು ವಿಧ್ಯಾರ್ಥಿಗಳಿಗೆ ಗುಂಪೊಂದು ಹಿಗ್ಗಾಮುಗ್ಗ ಥಳಿಸಿದ ಘಟನೆ ತಲಪಾಡಿಯಲ್ಲಿ ನಡೆದಿದೆ.
ನಗರ ಸಾರಿಗೆ ಬಸ್ಸಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಈ ಇಬ್ಬರು ವಿದ್ಯಾರ್ಥಿಗಳ ಮೇಲೆ ಸುಮಾರು 15 ಜನರಿದ್ದ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಬಾಟಲಿ, ಕೈಗಳಿಂದ ಹಲ್ಲೆ ನಡೆಸಿದೆ.

ಗಾಯಗೊಳಗಾದ ವಿಧ್ಯಾರ್ಥಿಗಳನ್ನು ಮಂಜೇಶ್ವರ ಕುಂಜತ್ತೂರು ನಿವಾಸಿಗಳಾದ ಫೈಝಿಲ್(17)ಮತ್ತು ಅಹಮ್ಮದ್ ಇಮ್ರಾನ್(17) ಎಂದು ಗುರುತಿಸಲಾಗಿದೆ.
ಫೈಝಿಲ್ ಮತ್ತು ಇಮ್ರಾನ್ ನಗರದ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಶನಿವಾರ ಬೆಳಿಗ್ಗೆ ಕುಂಜತ್ತೂರಿನ ಬಸ್ಸಿನಿಂದ ಇಳಿದು ಮಂಗಳೂರಿನ ಕಾಲೇಜಿಗೆ ಖಾಸಗಿ ಬಸ್ ಹತ್ತಿದ್ದರಪ . ಈ ವೇಳೆ ಬಸ್ಸಿನೊಳಗೆ ನುಗ್ಗಿದ 15 ರಷ್ಟು ಅಪರಿಚಿತ ಯುವಕರ ತಂಡವು ವಿದ್ಯಾರ್ಥಿಗಳನ್ನು ಹೊರಗೆಳೆದು ಕೈ ಮತ್ತು ಬಾಟಲಿಗಳಿಂದ ಹಲ್ಲೆಗೈದು ಪರಾರಿಯಾಗಿದೆ.
ಹಲ್ಲೆಗೊಳಗಾದ ವಿದ್ಯಾರ್ಥಿಗಳು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶುಕ್ರವಾರ ಸಂಜೆ ಮಂಗಳೂರಿನಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ ವೇಳೆ ಬಸ್ಸಿನಲ್ಲಿ ಸೀಟಿನ ವಿಚಾರದಲ್ಲಿ ಅದ ವಾಗ್ವಾದ ಹಲ್ಲೆಗೆ ಕಾರಣವೆನ್ನಲಾಗುತ್ತಿದೆ.ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.