DAKSHINA KANNADA
ಆಟೋದಲ್ಲಿ ಸ್ಟೋಟ ಪ್ರಕರಣ: ಶಂಕಿತ ಶಾರೀಕ್ ಗುರುತು ಪತ್ತೆ ಹಚ್ಚಿದ ಕುಟುಂಬಸ್ಥರು

ಮಂಗಳೂರು, ನವೆಂಬರ್ 21: ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿರುವ ಶಾರೀಕ್‌ನ ಕುಟುಂಬಸ್ಥರು ಶಿವಮೊಗ್ಗದಿಂದ ಮಂಗಳೂರಿನ ಆಸ್ಪತ್ರೆಗೆ ಆಗಮಿಸಿದ್ದಾರೆ.
ಶಂಕಿತ ಶಾರೀಕ್ ಗುರುತು ಪತ್ತೆಗೆ ಮೂವರು ಮಹಿಳೆಯರು ಆಗಮಿಸಿದ್ದು, ಮಹಿಳೆಯಯೊಂದಿಗೆ ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪರಮೇಶ್ವರ್ ಹೆಗಡೆ ಕೂಡ ಆಗಮಿಸಿದ್ದಾರೆ.

ಇನ್ನು ಶಂಕಿತ ಉಗ್ರ, ಆಟೋ ಚಾಲಕ ಪುರುಷೋತ್ತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿರುವ ಶಾರೀಕ್ ಕುಟುಂಬಸ್ಥರು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸಮ್ಮುಖದಲ್ಲಿ ಗುರುತು ಪತ್ತೆ ಮಾಡಿದ್ದಾರೆ.