DAKSHINA KANNADA
ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಕಲ್ಲು ತೂರಾಟ

ಪುತ್ತೂರು ಮೇ 28: ಪುತ್ತೂರಿನ ಪುರುಷರ ಕಟ್ಟೆ ಎಂಬಲ್ಲಿ ಬಿಂದು ಪ್ಯಾಕ್ಟರಿಗೆ ಸೇರಿದ ಬೋರ್ ವೆಲ್ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಪುತ್ತೂರು ಠಾಣೆಯಲ್ಲಿ ಎರಡು ಕಡೆಗಳಿಂದ ದೂರು ದಾಖಲಾಗಿದೆ.
ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿರುವ ಸಾಫ್ಟ್ ಡ್ರಿಂಕ್ಸ್ ಪ್ಯಾಕ್ಟರಿ ಬಿಂದು ಸಂಸ್ಥೆಯಲ್ಲಿ ಹಳೆಯ ಕೊಳವೆಬಾವಿಗಳನ್ನು ಶುದ್ಧೀಕರಿಸುತ್ತಿದ್ದ ವೇಳೆ ಸ್ಥಳೀಯ ಎಸ್‌ಡಿಪಿಐ ಕಾರ್ಯಕರ್ತರೆನ್ನಲಾದ ಸಮದ್ ಮತ್ತು ಸಲೀಂ ಎಂಬುವರು ಸಂಸ್ಥೆಯ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿ ಕಲ್ಲು ತೂರಾಟ ನಡೆಸಿರುವುದಾಗಿ ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಬಿಂದು ಸಂಸ್ಥೆಯ ಮ್ಯಾನೇಜರ್ ಲಕ್ಷ್ಮೀನಾರಾಯಣ ಅವರು ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
