BELTHANGADI
ಇನ್ನೂ ಪತ್ತೆಯಾಗದ ಅನುಭವ್…ಕಿಡ್ನಾಪರ್ಸ್ ಗಾಗಿ ಮುಂದುವರೆದ ಶೋಧ ಕಾರ್ಯ
ಬೆಳ್ತಂಗಡಿ ಡಿಸೆಂಬರ್ 18: ನಿನ್ನೆ ಸಂಜೆ ಉಜಿರೆಯಲ್ಲಿ ಅಪಹರಣವಾಗಿದ್ದ ಬಾಲಕನ ಕುರಿತು ಇಲ್ಲಿಯ ವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ ಬಾಲಕನ ಕಿಡ್ನಾಪ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ ಇಲಾಖೆ ಎರಡು ತಂಡಗಳಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಹಳದಿ ಯಲ್ಲೋ ಪ್ಲೇಟ್ ನಂಬರ್ ನ ಇಂಡಿಕಾ ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ಕಿಡ್ನಾಪ್ ಮಾಡಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಕಿಡ್ನಾಪರ್ಸ್ ಇರುವ ಶಂಕೆ ವ್ಯಕ್ತವಾಗಿದ್ದು ಶೋಧ ಕಾರ್ಯ ತೀವ್ರ ಗೊಳಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಶೋಧ ಕಾರ್ಯ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನಿಂದ ಹೊರ ಹೋಗುವ ದಾರಿಗಳಲ್ಲಿ ನಾಕಾಬಂದಿ ಮಾಡಲಾಗಿದೆ. ಜೊತೆಗೆ ಚಾರ್ಮಾಡಿ, ಕೊಟ್ಟಿಗೆಹಾರ ಪ್ರದೇಶದಲ್ಲೂ ಪೊಲೀಸರು ನಾಕ ಬಂಧಿ ಮಾಡಿದ್ದು, ಗಡಿ ಜಿಲ್ಲೆ ಗಳ ಪೊಲೀಸರಿಗೂ ಮಾಹಿತಿ ನೀಡಿ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಅಪಹರಣಕ್ಕೊಳಗಾದ ಬಾಲಕ ಅನುಭವ್ ತಂದೆ ಉಜಿರೆ ರಥಬೀದಿ ನಿವಾಸ್ ಬಿಜೋಯ್ ಉದ್ಯಮಿಯಾಗಿದ್ದು ಉಜಿರೆಯಲ್ಲಿ ಹಾರ್ಡ್ ವೇರ್ ಮಳಿಗೆಯನ್ನು ಹೊಂದಿದ್ದಾರೆ. ನಿನ್ನೆ ಸಂಜೆ 6.15 ಗಂಟೆಗೆ ಘಟನೆಯಾಗಿದೆ.ಬಾಲಕ ಅನುಭವ್, ಆತನ ಅಜ್ಜ ಶಿವಣ್ಣ ನ ಜೊತೆಗಿದ್ದ. ಒಮ್ಮೇಲೇ ಬಿಳಿ ಬಣ್ಣದ ಕಾರು ಬಂತು. ಶಿವಣ್ಣ ನನ್ನು ದೂಡಿ ಅನುಭವ್ ನನ್ನು ತಂಡ ಕಿಡ್ನಾಪ್ ಮಾಡಿದೆ.ಈ ಸಂಧರ್ಭ ಮೈದಾನದಲ್ಲಿ 50 ಕ್ಕೂ ಹೆಚ್ಚು ಮಂದಿ ಇದ್ರು. ಸ್ಪೀಡಾಗಿ ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ.ಬಾಲಕ ಅನುಭವ್ ಪ್ರತಿದಿನ ಮೈದಾನಕ್ಕೆ ಅಜ್ಜನ ಜೊತೆ ಬರುತ್ತಿದ್ದ. ಈ ಘಟನೆಯಾಗುತ್ತದೆ ಅಂತಾ ಯಾರೂ ಭಾವಿಸಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೂ, ಜಿಲ್ಲೆಯ ಉಸ್ತುವಾರಿ ಸಚಿವರಾಗಲೀ, ಸಂಸದರಾಗಲಿ ಜಿಲ್ಲೆಯ ಕಾನೂನು ಸುವವಸ್ಥೆ ಬಗ್ಗೆ ಯಾವುದೇ ರೀತಿಯ ಸಭೆ ನಡೆಸದೇ ಇರುವುದು ವಿಪರ್ಯಾಸವಾಗಿದೆ. ಕೇವಲ ಗ್ರಾಮಪಂಚಾಯತ್ ಚುನಾವಣೆ ಗುಂಗಿನಲ್ಲೇ ಸಂಸದರು, ಸಚಿವರುಗಳು ಇರುವುದು ಜಿಲ್ಲೆಯ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.