Connect with us

KARNATAKA

ಅಣ್ಣಾಮಲೈಯವರ ಅನುಭವದ ಬುತ್ತಿ ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ 18ರಂದು ಬಿಡುಗಡೆ

ಬೆಂಗಳೂರು, ಜನವರಿ 14: ಕರ್ನಾಟಕದ ಸಿಂಗಂ ಎಂದೇ ಪರಿಚಿತರಾಗಿರುವ ಖಡಕ್ ಐಪಿಎಸ್ ಅಧಿಕಾರಿ  ಅಣ್ಣಾಮಲೈ ಅವರ ಹೆಸರು ಕೇಳದವರೇ ಇಲ್ಲ. ಅಧಿಕಾರದಲ್ಲಿದ್ದಷ್ಟು ಸಮಯ ಒಂದಿಲ್ಲೊಂದು ಸುದ್ದಿಯಲ್ಲಿದ್ದ ಅಣ್ಣಾಮಲೈಯವರು ಪೋಲಿಸ್ ಇಲಾಖೆಯ ಅನುಭವದ ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ ಎಂಬ ಪುಸ್ತಕದೊಂದಿಗೆ ಬಂದಿದ್ದಾರೆ.

ನನ್ನ ಪ್ರಕಾರ ಪೊಲೀಸ್ ಕೆಲಸ ದೇವರಿಗೆ ಬಹಳ ಹತ್ತಿರವಾದ ಹಾಗೂ ಹೆಚ್ಚು ಜವಾಬ್ದಾರಿಯ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಆದರೆ ಕುಟುಂಬದ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣ ನೀಡಿ, ಕೆಲಸಕ್ಕೆ 2019ರಲ್ಲಿ ರಾಜೀನಾಮೆ ನೀಡಿರುವವರು ಅಣ್ಣಾಮಲೈ. ನಂತರ ಬಿಜೆಪಿಯಿಂದ ಪ್ರಭಾವಿತರಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಇವರ ಸುದೀರ್ಘ ವೃತ್ತಿ ಜೀವನದಲ್ಲಿ ಕಂಡು- ಕೇಳಿದ ತಮ್ಮ ಅನುಭವದ ಬುತ್ತಿಯನ್ನು ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ ಎಂಬ ಪುಸ್ತಕದಲ್ಲಿ ಅಣ್ಣಾಮಲೈ ತೆರೆದಿಟ್ಟಾರೆ. ಪೊಲೀಸ್​ ಹುದ್ದೆಯ ಪಯಣದಲ್ಲಿ ನೆನಪಿನ ಬುತ್ತಿಯನ್ನು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಹೇಗೆ ಮಾನವೀಯ ನೆಲೆಗಟ್ಟಿನಲ್ಲಿ ಅವರನ್ನು ತಂದುನಿಲ್ಲಿಸಿತು? ಕೆಲವೇ ವರ್ಷಗಳಲ್ಲಿ ತಾವು ಹೇಗೆ ‘ಕರ್ನಾಟಕದ ಸಿಂಗಂ’ ಆಗಿರುವುದು ಎಂಬ ಮಾಹಿತಿ ಈ ಪುಸ್ತಕದಲ್ಲಿ ಇದೆ ಎನ್ನಲಾಗಿದೆ.

ನಾಚಿಕೆ, ಸರಳ ಹಳ್ಳಿಯ ಹುಡುಗ ಸಾರ್ವಜನಿಕ ಸೇವೆಗೆ ಅರ್ಪಿಸಿಕೊಂಡದ್ದು ಹೇಗೆ? ಕರ್ನಾಟಕದಲ್ಲಿನ ಒಂದು ದಶಕದ ವೃತ್ತಿ ಜೀವನದಲ್ಲಿ ಅವರು ಇಷ್ಟೆಲ್ಲಾ ಗೌರವ ಗಳಿಸಲು ಹೇಗೆ ಸಾಧ್ಯವಾಯಿತು? ಅವರ ವೃತ್ತಿ ಜೀವನದಲ್ಲಿ ಎದುರಾದ ಪ್ರಶ್ನೆಗಳು ಏನು ಎಂಬುದರ ಜತೆಗೆ, ರಾಜಕಾರಣಿಗಳು ಕೆಟ್ಟವರೇ? ಮತ್ತು ಉತ್ತಮ ನಡತೆಯುಳ್ಳ ಜನರು ರಾಜಕೀಯ ಪ್ರವೇಶ ಮಾಡಲು ಭಯಪಡುವಂಥ ಸ್ಥಳವಾಗಿದೆಯೆ ಎಂಬಿತ್ಯಾದಿಯ ಬಗ್ಗೆ ಈ ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ. ಈ ಪುಸ್ತಕ ಇದೇ 18ರಂದು ಬಿಡುಗಡೆಯಾಗಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *