Connect with us

LATEST NEWS

ಸಂಭ್ರಮದ ಕಾರ್ಯಕ್ರಮಗಳಿಂದ ದೂರ ಇರಿ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ, ಮೇ 24: ಉಡುಪಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿದೆ.ಜನರ ಸಹಕಾರಕ್ಕೆ ಧನ್ಯವಾದ ಹೇಳುತ್ತೇನೆ.ಇದೇ ರೀತಿ ಸಹಕಾರ ನೀಡಿದರೆ ಇನ್ನೊಂದು ಲಾಕ್ ಡೌನ್ ಗೆ ಹೋಗುವುದು ತಪ್ಪಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ನಾನು ಜಿಲ್ಲೆಯ ಅನೇಕ ಸೋಂಕಿತರ ಮನೆಗಳಿಗೆ ,ಐಸೊಲೇಟೆಡ್ ಆದವರನ್ನು ಸಂಪರ್ಕಿಸಿದ್ದೇನೆ.ಇಲ್ಲಿ ತಿಳಿದ ವಿಷಯವೆಂದರೆ ಮದುವೆ ಸಮಾರಂಭಗಳಿಗೆ ,ಮೆಹಂದಿ‌ ಮತ್ತಿತರ ಕಾರ್ಯಕ್ರಮಗಳಿಗೆ ಹೋದವರಿಗೆ ಸೋಂಕು ತಗಲುವುದು ಕಂಡುಬರುತ್ತಿದೆ. ಇನ್ನು ಗುಂಪಾಗಿ ಅಗತ್ಯ ವಸ್ತು ಖರೀದಿಸುವವರಿಗೂ ಸೋಂಕು ಕಂಡು ಬರುತ್ತಿದೆ.

ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಕೊರೊನಾ ಸೋಂಕು ಹೆಚ್ಚಾಗಿದ್ದು, ಆದಷ್ಟು ಸಂಭ್ರಮದ ಕಾರ್ಯಕ್ರಮಗಳಿಂದ ದೂರ ಇರಿ, ಸೋಂಕಿತರನ್ನು ಭೇಟಿಯಾದ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡಿದ್ದೇನೆ. ಮದುವೆಯಲ್ಲಿ ಭಾಗಿ ಆದವರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದೆ, ಆದಷ್ಟು ಮದುವೆಗಳನ್ನು ಮುಂದೂಡಿದರೆ ಒಳಿತು.

ಉಡುಪಿಯಲ್ಲೀಗ ಮೆಹಂದಿ ಕಾಟ ಹೆಚ್ಚಾಗಿದ್ದು, ಮದುವೆಗೆ ಪರ್ಮೀಶನ್ ಪಡೆದು ಮೆಹೆಂದಿ ಸೆಲಬ್ರೇಷನ್ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಮದುವೆಗೆ ಮಾತ್ರ ಅವಕಾಶ ನೀಡಿದ್ದು, ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ ಮುಂದಾಗಿದೆ.

ಅನುಮತಿ‌ ಇಲ್ಲದೆ ಕಾರ್ಯಕ್ರಮ ಮಾಡಿದ್ರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಹಾಗು ಭಾಗವಹಿಸುವ ವಿಡಿಯೋ, ಫೊಟೋಗ್ರಾಫರ್ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು, ಈಗಾಗಲೇ ಮೆಹೆಂದಿ ಆಚರಿಸಿದ್ದಕ್ಕೆ ಎಫ್ ಐ ಆರ್ ದಾಖಲಿಸಲಾಗದೆ.

ಜಿಲ್ಲೆಯ ಕುಂದಾಪುರದ ಅಸೋಡಿಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಧರಿಸದೆ ಹುಲಿ‌ಕುಣಿತ ಮಾಡಿ ಮೆಹೆಂದಿಯಲ್ಲಿ ಭಾಗಿಯಾದ ಯುವಕರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಮದುವೆ ಕಾರ್ಯಕ್ರಮ ದಲ್ಲಿ ಭಾಗವಹಿಸಿದಿರಿ, ಮೆಹಂದಿ ಕಾರ್ಯಕ್ರಮ ಆಯೋಜಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ. ಲಾಕ್ಡೌನ್ ಮುಂದುವರಿಯಲು ಅವಕಾಶ ಕೊಡಬೇಡಿ ಎಂದು ಜಿಲ್ಲೆಯ ಜನರಲ್ಲಿ ಕೈಮುಗಿದು ವಿನಂತಿಸಿದ ಡಿಸಿ ಉಡುಪಿ ಡಿಸಿ ಜಿ ಜಗದೀಶ್.

Video:

Share Information
Continue Reading
Advertisement
Click to comment

Leave a Reply

Your email address will not be published. Required fields are marked *