DAKSHINA KANNADA
“ಪ್ರಣವಾನಂದ ಸ್ವಾಮೀಜಿ ವಿರುದ್ದ ಹೇಳಿಕೆಗಳು ಖಂಡನಾರ್ಹ-ಸಚಿವ ಮಧು ಬಂಗಾರಪ್ಪಗೆ ವಾರ್ನಿಂಗ್..!
ಬಿಲ್ಲವ ಮತ್ತು ಈಡಿಗ ಸಮಾಜದ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ಸಮುದಾಯದ ಪರವಾಗಿ ಹೋರಾಟ ಮಾಡುತ್ತಿರುವ ಪ್ರಣವಾನಂದ ಸ್ವಾಮೀಜಿ ಅವರ ವಿರುದ್ದವಾಗಿ ಹೇಳಿಕೆ ನೀಡುವುದನ್ನು ಬಿಲ್ಲವ ಈಡಿಗ ರಾಷ್ಟ್ರೀ ಮಹಾ ಮಂಡಲ ಉಗ್ರವಾಗಿ ಖಂಡಿಸಿದೆ.
ಮಂಗಳೂರು : ಬಿಲ್ಲವ ಮತ್ತು ಈಡಿಗ ಸಮಾಜದ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ಸಮುದಾಯದ ಪರವಾಗಿ ಹೋರಾಟ ಮಾಡುತ್ತಿರುವ ಪ್ರಣವಾನಂದ ಸ್ವಾಮೀಜಿ ಅವರ ವಿರುದ್ದವಾಗಿ ಹೇಳಿಕೆ ನೀಡುವುದನ್ನು ಬಿಲ್ಲವ ಈಡಿಗ ರಾಷ್ಟ್ರೀ ಮಹಾ ಮಂಡಲ ಉಗ್ರವಾಗಿ ಖಂಡಿಸಿದೆ.
ಮಂಗಳೂರಿನಲ್ಲಿ ಈ ಬಗ್ಗೆ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಹಾಮಂಡಲದ ಪ್ರಮುಖರು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮತ್ತು ಸ್ವಾಮೀಜಿಗಳ ನಡುವಿನ ತಪ್ಪು ಅಭಿಪ್ರಾಯಗಳಿಂದ ಈ ಗೊಂದಲದ ಹೇಳಿಕೆಗಳು ಬಂದಿವೆ,
ಇದರ ಹಿಂದೆ ಯಾವುದೋ ಒಂದು ಪಿತೂರಿ ಕೆಲಸ ಮಾಡುತ್ತಿದೆ. ಮಧು ಬಂಗಾರಪ್ಪ ಅವರು ಸ್ವಾಮೀಜಿ ಅಗತ್ಯವಿಲ್ಲ ಎಂಬರ್ಥ ರೀತಿಯಲ್ಲಿ ಮಾತನಾಡಿದ್ದಾರೆ.
ಸಮುದಾಯದ ನಾಯಕರುಗಳು, ರಾಜಕೀಯ ಮುಖಂಡರುಗಳು ಸರಿಯಾಗಿ ಕೆಲಸ ಮಾಡಿದ್ದಿದ್ದರೆ ಸ್ವಾಮೀಜಿ ಪ್ರವೇಶ ಆಗ್ತಾ ಇರಲಿಲ್ಲ. ದಿವಂಗತ ಬಂಗಾರಪ್ಪ, ಆರ್ ಎಲ್ ಜಾಲಪ್ಪ ಮತ್ರತು ಜನಾರ್ಧನ ಪೂಜಾರಿಯ ರಾಜಕೀಯ ನಿವೃತ್ತಿಯಿಂದ ಬಿಲ್ಲವರ ಧ್ವನಿಯಾಗಿ ಮಾತಾಡುವ ಮುಖಂಡರು ಇರಲಿಲ್ಲ.
ಈ ಸಂದರ್ಭದಲ್ಲಿ ಸಮಾಜದ ಪರವಾಗಿ ಗಟ್ಟಿ ಧ್ವನಿಯಾಗಿ ನಿಂತವರು ಪ್ರಣವಾನಂದ ಸ್ವಾಮೀಜಿ, ಯಾವುದೇ ಆಮೀಷ, ಆಸೆಗಳಿಗೆ ಬಲಿ ಬೀಳದೆ ಸ್ವಾಮೀಜಿ ಸಮುದಾಯನ್ನು ಸಂಘಟಿಸಿದ್ದರು,ಇದು ರಾಜಕೀಯ ನಾಯಕರುಗಳಿಗೆ ಮುಳ್ಳಾಗಿ ಪರಿಣಮಿಸಿದೆ,
ಮಧು ಬಂಗಾರಪ್ಪ ಅವರು ಸ್ವಾಮೀಜಿ ಮತ್ತು ಆರ್ಯ ಈಡಿಗ ಸಂಘದ ಖಾಯಂ ಅಧ್ಯಕ್ಷರಾಗಿರುವ ತಿಮ್ಮೆಗೌಡರು ಸ್ವಾಮೀಜಿ ಬಗ್ಗೆ ಹಗುರವಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಸಿದರು.
You must be logged in to post a comment Login