LATEST NEWS
ಸೌಜನ್ಯಳ ತನಿಖೆಯಲ್ಲಿ ಲೋಪ ಮಾಡಿದ ಅಧಿಕಾರಿಗಳ ವಿರುದ್ದ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕು – ಸಜೀವ ಮಠಂದೂರು

ಮಂಗಳೂರು ಸೆಪ್ಟೆಂಬರ್ 13: ವಿಧ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು ಹಾಗೂ ತನಿಖೆಯ ಸಂದರ್ಭ ಲೋಪ ಮಾಡಿದ ತನಿಖಾಧಿಕಾರಿ ಹಾಗೂ ವೈದ್ಯರ ಮೇಲ ಸರಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ನಡೆಸುತ್ತಿರುವ ಜಿಲ್ಲಾಮಟ್ಟದ ಸತ್ಯಾಗ್ರಹ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು, ಸೌಜನ್ಯ ಹೋರಾಟಕ್ಕೆ ಬೆಂಬಲ ಇದ್ದು, ನನ್ನ ರಾಜಕೀಯ ಜೀವನದ ಸುಧೀರ್ಘ ಹೋರಾಟದಲ್ಲಿ ನಾನು ನಾಲ್ಕನೇ ಬಾರಿ ಸೌಜನ್ಯ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದರು. ಅಲ್ಲದೆ ಸೌಜನ್ಯ ಅತ್ಯಾಚಾರ ಕೊಲೆ ನಡೆದಿದ್ದು ನಿಜ ಎನ್ನುವುದು ಈಗಾಗಲೇ ಸಾಭೀತಾಗಿದೆ, ಆದರೆ ನಿಜ ಆರೋಪಿಗಳನ್ನು ಬಂಧಿಸಲು ಆಗಲಿಲ್ಲ.

ಸೌಜನ್ಯ ಕೊಲೆ ಆರೋಪಿಗಳನ್ನು ಗುರುತಿಸುವ ಕೆಲಸ ಸರಕಾರ ಮಾಡಬೇಕು. ರಾಜ್ಯ ಸರಕಾರ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ಸೌಜನ್ಯಗಳಿಗೆ ನ್ಯಾಯಕೊಡಿಸುವ ಕೆಲಸ ಮಾಡಬೇಕು ಎಂದರು.
ಇನ್ನು ಸೌಜನ್ಯ ಪ್ರಕರಣದ ತನಿಖೆಗೆ ಸಂದರ್ಭ ಲೋಪಗಳನ್ನು ಮಾಡಿರುವ ಅಧಿಕಾರಿಗಳ ವಿರುದ್ದ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕು ಎಂದರು. ಪ್ರತಿಭಟನೆಯಲ್ಲಿ ಸೌಜನ್ಯಳ ತಾಯಿ ಕೂಡ ಭಾಗವಹಿಸಿದ್ದರು.