LATEST NEWS
ಮಂಗಳೂರು ಗೋಲೀಬಾರ್ ಗೆ ರಾಜ್ಯ ಸರಕಾರವೇ ನೇರ ಹೋಣೆ – ರಮಾನಾಥ ರೈ
ಮಂಗಳೂರು ಗೋಲೀಬಾರ್ ಗೆ ರಾಜ್ಯ ಸರಕಾರವೇ ನೇರ ಹೋಣೆ – ರಮಾನಾಥ ರೈ
ಮಂಗಳೂರು ಡಿಸೆಂಬರ್ 20:-ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಿನ್ನೆ ನಡೆದ ಘರ್ಷಣೆಯಲ್ಲಿ ಮೃತಪಟ್ಟ ಇಬ್ಬರ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ದಕ್ಷಿಣಕನ್ನಡ ಕಾಂಗ್ರೆಸ್ ಜಿಲ್ಲಾ ಘಟಕ ಆರೋಪಿಸಿದೆ.
ಕಾಂಗ್ರೆಸ್ ಜಿಲ್ಲಾ ಘಟದ ಅಧ್ಯಕ್ಷ ಕೆ.ಹರೀಶ್‌ಕುಮಾರ್ ಮತ್ತು ಮಾಜಿ ಸಚಿವ ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಲೀಬಾರ್ ನಡೆಸುವಂಥ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿರಲಿಲ್ಲ. ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ರಾಜ್ಯ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ. ಮಂಗಳೂರಿಗಿಂತಲೂ ಹೆಚ್ಚು ಜನರು ಸೇರಿದ್ದ ಕಡೆಗಳಲ್ಲಿಯೇ ಪೊಲೀಸರು ಪ್ರತಿಭಟನೆ ನಿಯಂತ್ರಿಸಿದ್ದಾರೆ. ಆದರೆ ಇಲ್ಲಿನ ಪೊಲೀಸರಿಗೆ ಏಕೆ ಸಾಧ್ಯವಾಗಲಿಲ್ಲ’ಎಂದು ಪ್ರಶ್ನಿಸಿದರು.
ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಪ್ರತಿಭಟನೆ ನಡೆಸುವುದಾಗಿ ಮೊದಲೇ ಮಾಹಿತಿ ನೀಡಲಾಗಿತ್ತು. ಕೊನೆಗಳಿಗೆಯಲ್ಲಿ ಪೊಲೀಸರು ಮಾಹಿತಿ ನಿರಾಕರಿಸಿದ್ದರು. ನಿಷೇಧಾಜ್ಞೆ ಹೇರಿರುವ ಮಾಹಿತಿ ಇಲ್ಲದೆ ಜನರು ಪ್ರತಿಭಟನೆಗಾಗಿ ಬೀದಿಗಳಿದಿದ್ದರು ಎಂದು ಹೇಳಿದರು. ಗೋಲೀಬಾರ್ ನಂತರವೂ ಪೊಲೀಸರ ದೌರ್ಜನ್ಯ ಮುಂದುವರಿದಿದೆ.
ಮೃತದೇಹ ಇರಿಸಿರುವ ಹೈಲ್ಯಾಂಡ್ ಆಸ್ಪತ್ರೆಗೆ ನುಗ್ಗಿದ ಪೊಲೀಸರು ಐಸಿಯು ಸಮೀಪವೂ ಅಶ್ರುವಾಯು ಸಿಡಿಸಿ ಜನರಿಗೆ ತೊಂದರೆ. ಕರ್ಫ್ಯೂ ಹೆಸರಿನಲ್ಲಿ ಜನರ ಬದುಕಿಗೆ ಹಾನಿ ಮಾಡಿದ್ದಾರೆ. ಇದು ಖಂಡನೀಯ ಎಂದರು. ಮಂಗಳೂರಿನ ಗೋಲೀಬಾರ್ ಮತ್ತು ಇಬ್ಬರು ಅಮಾಯಕರ ಸಾವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇರ ಹೊಣೆ ಎಂದು ನುಡಿದರು.