LATEST NEWS
ಕಸಾಯಿ ಖಾನೆಗೆ 15 ಕೋಟಿ ರೂಪಾಯಿ ಅನುದಾನ ನೀಡಿದ ಸಚಿವ ಖಾದರ್
ಕಸಾಯಿ ಖಾನೆಗೆ 15 ಕೋಟಿ ರೂಪಾಯಿ ಅನುದಾನ ನೀಡಿದ ಸಚಿವ ಖಾದರ್
ಮಂಗಳೂರು ಅಕ್ಟೋಬರ್ 6: ಅಕ್ರಮಗಳ ಆರೋಪ ಹೊಂದಿರುವ ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಯ 15 ಕೋಟಿ ರೂಪಾಯಿ ಅನುದಾನವನ್ನು ನೀಡಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ವಿವಾಸ ಸೃಷ್ಠಿಸಿದ್ದಾರೆ.
ಮಂಗಳೂರಿನ ಕುದ್ರೋಳಿಯಲ್ಲಿರುವ ಕಸಾಯಿಖಾನೆ ಅಕ್ರಮವಾಗಿ ದನಗಳನ್ನು ವಧೆ ಮಾಡಲಾಗುತ್ತದೆ ಎಂಬ ಗಂಭೀರ ಆರೋಪವನ್ನು ಹೊಂದಿದ್ದು ಜಿಲ್ಲೆಯಲ್ಲಿ ಕದ್ದ ದನಗಳನ್ನೆಲ್ಲಾ ಕುದ್ರೋಳಿ ಕಸಾಯಿಖಾನೆ ಯಲ್ಲೇ ವಧೆ ಮಾಡುವ ಆರೋಪವಿದೆ.
ಈಗ ಅದೇ ಕಸಾಯಿಖಾನೆ ಯ ಅಭಿವೃದ್ಧಿ ಸಚಿವ ಯುಟಿ ಖಾದರ್ 15 ಕೋಟಿ ರೂಪಾಯಿ ಅನುದಾನ ನೀಡಿದ್ದು ಅನುಮಾನ ಸೃಷ್ಠಿಸಿದೆ. ಒಂದೆಡೆ ಗೋಶಾಲೆಗಳಿಗೆ ಅನುದಾನ ಇನ್ನೂ ಮಂಜೂರಾಗಿಲ್ಲ. ಸರ್ಕಾರ ಮುಂದೆ ಕೈಯೊಡ್ಡುವ ಸ್ಥಿತಿ ಜಿಲ್ಲೆಯ ಕೆಲ ಗೋಶಾಲೆಗಳದ್ದು.
ಈ ನಡುವೆ ಯುಟಿಖಾದರ್ ಒಂದೇ ಕಸಾಯಿಖಾನೆ ಗೆ 15 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಕಸಾಯಿಖಾನೆ ಅಭಿವೃದ್ಧಿ ಗೆ 15 ಕೋಟಿ ರೂಪಾಯಿ ಅನುದಾನ ನೀಡಿರುವ ಖಾದರ್, ಜನರು ತಿನ್ನುವ ಆಹಾರ ಶುಚಿಯಾಗಿರಬೇಕೆಂದು ಹಣ ನೀಡಿದ್ದೇನೆ ಅಂತಾ ಹೇಳಿದ್ದಾರೆ.