Connect with us

    DAKSHINA KANNADA

    ಕೋಮುವಾದಿಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ – SDPI ಅರೋಪ

    ಕೋಮುವಾದಿಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವಿಫಲ – SDPI ಅರೋಪ

    ಮಂಗಳೂರು,ಡಿಸೆಂಬರ್ 12 : ಉತ್ತರ ಕನ್ನಡ ಜಿಲ್ಲೆಯ ಹೊನ್ನವರ ಪಟ್ಟಣದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶಾಂತಿ ಕದಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು SDPI ಆರೋಪಿಸಿದೆ.

    ಈ ಬಗ್ಗೆ ಹೇಳಿಕೆ ನೀಡಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಜ್ಯಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ಪ್ರತಿಭಟನೆ ಎಂಬ ನೆಪವೊಡ್ಡಿ ಗಲಭೆ ಮಾಡಿರುವುದು ಪೂರ್ವ ಯೋಜಿತ ಕೃತ್ಯವಲ್ಲದೇ ಮತ್ತೇನು ಅಲ್ಲ ಎಂಬ ಸತ್ಯಾಂಶ ಸರ್ಕಾರಕ್ಕೆ ಗೊತ್ತಿದೆ.

    ರಾಜ್ಯದಲ್ಲಿ ಕೋಮುವಾದಿ ಗೂಂಡಾಗಳನ್ನು ನಿಯಂತ್ರಿಸುವುದರಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

    ಪರೇಶ್ ಮೇಸ್ತಾ ಎಂಬ ಯುವಕನ ಸಾವಿಗೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಇದು ಜಿಹಾದಿಗಳ ಕೆಲಸ ಎಂದು ಹೇಳಿಕೆ ನೀಡಿ ಈ ನಿಗೂಢ ಸಾವಿಗೆ ಕೋಮು ಬಣ್ಣ ಹಚ್ಚಿದ್ದಾರೆ.

    ಬಿಜೆಪಿ ಮುಖಂಡರು ಸೇರಿದಂತೆ ಹಿಂದೂ ಪರ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯ ಹೆಸರಿನಲ್ಲಿ ಮಾಡಿದ ಗಲಾಟೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಪೊಲೀಸರ ಸಮ್ಮುಖದಲ್ಲಿ ಘೋಷಣೆಗಳನ್ನು ಕೂಗಿರುವುದು ಪೊಲೀಸರ ವೈಫಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದ್ದಾರೆ.

    ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಯ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪ್ರಚೋದನತ್ಮಾಕ ಘೋಷಣೆಗಳನ್ನು ಕೂಗುತ್ತಿದ್ದರು.

    ಅದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಜರುಗಿಸಿಲ್ಲಿಲ್ಲದಿರುವುದಕ್ಕೆ ಏನು ಕಾರಣ.? ಯಾರ ಒತ್ತಡಕ್ಕೆ ಪೊಲೀಸ್ ಇಲಾಖೆ ಮಣಿದಿದೆ.

    ಪಶ್ಚಿಮ ವಲಯ ಐ.ಜಿ.ಪಿ ಹೇಮಂತ್ ನಿಂಬಾಳ್ಕರ್ ಅವರ ಮೇಲೂ ದಾಳಿ ಆಗುತ್ತೆ ಎಂದರೆ, ಇನ್ನು ಜನಸಾಮಾನ್ಯರ ಗತಿ ಏನು? ಯಾರು ಜನತೆಗೆ ರಕ್ಷಣೆ ಕೊಡುವವರು? ಈ ಎಲ್ಲಾ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡ ಬೇಕಾಗಿದೆ ಎಂದು ಹನ್ನಾನ್ ರವರು ಒತ್ತಾಯಿಸಿದ್ದಾರೆ.

    ಕೋಮುವಾದಿ ಗೂಂಡಾಗಳ ಅಟ್ಟಹಾಸಕ್ಕೆ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಡುವುದರಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ.

    ಕೋಮುವಾದಿಗಳ ದಾಳಿಗೆ ಪೊಲೀಸ್ ರಿಗೂ ರಕ್ಷಣೆ ಇಲ್ಲದಂತಾಗಿದೆ. ಇಷ್ಟಾದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳುತ್ತಿರುವುದು ನಾಚಿಕೆಗೇಡಿತನ.

    ಕೋಮುವಾದಿ ಗೂಂಡಾಗಳು ನಿರಂತರವಾಗಿ ಹೋರಾಟದ ಹೆಸರಿನಲ್ಲಿ ಮಾಡುತ್ತಿರುವ ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಪೊಲೀಸರು ಸಿರಸಿ ತಾಲೂಕಿನ ಗಡಿಹಳ್ಳಿ, ಬಿಳಿಗಿರಿ ಕೊಪ್ಪದ ನಿವಾಸಿ ಅಬ್ದುಲ್ ಗಪೂರ್ ಶುಂಠಿ ಎಂಬುವವರ ನಾಪತ್ತೆ ಪ್ರಕರಣ ಮರೆತ್ತಿದ್ದಾರೆ.

    ಡಿಸೆಂಬರ್ 6 ರಂದು ಗಪೂರ್ ಮತ್ತು ಇತರೆ ಇಬ್ಬರು ಲಾರಿಯಲ್ಲಿ ಹೊನ್ನಾವರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಡೀನ್ ಬಾಳ ಹತ್ತಿರ ಏಕಾಏಕಿ ಲಾರಿಯ ಮೇಲೆ ಕಲ್ಲು ತೂರಾಟ ನಡೆದಿದೆ.

    ಕಿಡಿಗೇಡಿಗಳು ಲಾರಿಯನ್ನು ಸಂಪೂರ್ಣವಾಗಿ ಜಖಂ ಗೊಳಿಸಿದ್ದಾರೆ.

    ಪ್ರಾಣ ಉಳಿಸಿ ಕೊಳ್ಳುವ ಸಲುವಾಗಿ ಗಪೂರ್ ಸೇರಿದಂತೆ ಮೂವರು ಓಡಿ ಹೋಗಿದ್ದಾರೆ. ಆದರೆ ಇಲ್ಲಿಯವರೆಗೂ ಗಪೂರ್ ಎಲ್ಲಿದ್ದಾರೆ ಎಂಬುವುದು ನಿಗೂಢವಾಗಿದೆ.

    ಗಪೂರ್ ರವರ ಹೆಂಡತಿ ಡಿಸೆಂಬರ್ 8 ರಂದೇ ನಾಪತ್ತೆಯಾಗಿರುವ ಗಪೂರ್ ರವರನ್ನು ಪತ್ತೆ ಹಚ್ಚಿ ಕೊಡುವಂತೆ ದೂರು ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಗಪೂರ್ ರವರ ಪತ್ತೆಯಾಗಿಲ್ಲ.

    ರಾಜ್ಯ ಸರ್ಕಾರ ಈ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ ಬೇಕು.

    ಗಪೂರ್ ರವರನ್ನು ಪತ್ತೆ ಹಚ್ಚುವಂತಹ ಕೆಲಸ ತುರ್ತಾಗಿ ಮಾಡ ಬೇಕು ಹಾಗೂ ರಾಜ್ಯದಾದ್ಯಂತ ಕೋಮುವಾದಿ ಗೂಂಡಾಗಳನ್ನು ನಿಯಂತ್ರಿಸುವ ಕೆಲಸ ಸರ್ಕಾರದಿಂದ ಪ್ರಾಮಾಣಿಕವಾಗಿ ಆಗ ಬೇಕೆಂದು ಅವರು ಒತ್ತಾಯಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *