Connect with us

    LATEST NEWS

    ಉಡುಪಿ ಜಿಲ್ಲೆ ಅನ್ಲಾಕ್ – ಸಂಜೆ 5 ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ

    ಉಡುಪಿ ಜೂನ್ 21: ಕೊರೊನಾ ಪ್ರಕರಣಗಳು ಇಳಿಕೆಯಲ್ಲಿರುವ ಹಿನ್ನಲೆ ಅನ್ ಲಾಕ್ 2.0 ನ ಸಡಿಲಿಕೆಗಳು ಈಗ ಉಡುಪಿ ಜಿಲ್ಲೆಗೆ ದೊರೆಯಲಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಇರುವ 6 ಜಿಲ್ಲೆಗಳನ್ನು ಅನ್ಲಾಕ್ ಮಾಡಿ ರಾಜ್ಯ ಸರಕಾರ ಇಂದು ಆದೇಶ ಹೊರಡಿಸಿದೆ.


    ಎರಡು ದಿನಗಳ ಹಿಂದೆ ರಾಜ್ಯ ಸರಕಾರ ಕೊರೊನಾ ಪಾಸಿಟಿವಿ ಪ್ರಕರಣ ಕಡಿಮೆ ಇರುವ 16 ಜಿಲ್ಲೆಗಳಲ್ಲಿ ಸಂಜೆ 5 ರವರೆಗೆ ಎಲ್ಲಾ ರೀತಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಈಗ ಉಡುಪಿ ಜಿಲ್ಲೆ ಸೇರಿದಂತೆ ಮತ್ತೆ ಆರು ಜಿಲ್ಲೆಗಳನ್ನು ಅನ್ ಲಾಕ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಉಡುಪಿ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನಿಯಮ ಸಡಿಲಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಜಿಲ್ಲೆಗಳಲ್ಲಿ ಸಂಜೆ 5 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ.


    ಉಡುಪಿ ಜಿಲ್ಲೆಯಲ್ಲಿ ಕೊವೀಡ್ ಧೃಡಿಕರಣ ದರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಶಾಸಕ ರಘು ಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಮುಖ್ಯಮಂತ್ರಿಗಳಿಗೆ ಲಾಕ್ ಡೌನ್ ತೆರವುಗೊಳಿಸಲು ಮನವಿ ಸಲ್ಲಿಸಿದ್ದರು. ಇದೀಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮಹತ್ವದ ಸೂಚನೆ ನೀಡಿದ್ದು ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ಮಾಡಲಾಗಿದೆ. ಈ ಆದೇಶದ ಪ್ರಕಾರ ಬೆಳಿಗ್ಗೆ 5ರಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ತೆರೆಯಬಹುದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *