Connect with us

  UDUPI

  ಉಡುಪಿ ನಗರಸಭೆ ಪೌರಾಯುಕ್ತ ಮಂಜುನಾಥಯ್ಯ ಅಣಕು ಶವಯಾತ್ರೆ

  ಉಡುಪಿ ನಗರಸಭೆ ಪೌರಾಯುಕ್ತ ಮಂಜುನಾಥಯ್ಯ ಅಣಕು ಶವಯಾತ್ರೆ

  ಉಡುಪಿ ಅಕ್ಟೋಬರ್ 6:- ಉಡುಪಿ ನಗರಸಭೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನಡೆಯತ್ತಿದ್ದು , ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ಪೌರಾಯುಕ್ತ ಮಂಜುನಾಥಯ್ಯ ಅವರನ್ನು ಈ ಕೂಡಲೇ ವರ್ಗಾಯಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

  ನಂತರ ಪೌರಾಯುಕ್ತ ಮಂಜುನಾಥಯ್ಯ ಅವರ ಶವಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು ಉಡುಪಿ ನಗರಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ನಗರಸಭೆ ಆಯುಕ್ತರ ಲಂಚಾವತಾರಕ್ಕೆ ಜನರು ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು , ಶಿಕ್ಷಣ ಇಲಾಖೆಯ ಬಿ.ಒ ಆಗಿದ್ದ ಮಂಜುನಾಥಯ್ಯ ಅವರನ್ನು ಈ ಕೂಡಲೇ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

  ಕಳೆದ 10ವರ್ಷಕ್ಕೂ ಅಧಿಕ ಕಾಲ ಉಡುಪಿಯಲ್ಲೇ ಸರ್ಕಾರಿ ಅಧಿಕಾರಿಯಾಗಿರುವ ಮಂಜುನಾಥಯ್ಯ ಇದ್ದು , ರಾಜಕೀಯ ಪ್ರಭಾವ ಬಳಸಿ ಅಧಿಕಾರ ಗಿಟ್ಟಿಸಿ ಪೌರಾಯುಕ್ತರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply