DAKSHINA KANNADA
ಪುತ್ತೂರು ಬಸ್ ನಿಲ್ದಾಣದಲ್ಲಿ ಯುವಕರಿಗೆ ಹಲ್ಲೆ ಪ್ರಕರಣ – ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

ಪುತ್ತೂರು ಸೆಪ್ಟೆಂಬರ್ 02: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಬಂದ ಯುವಕನಿಗೆ ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕುರಿಯ ನಿವಾಸಿ ಫಾರೂಕ್ (32) ,ಬಲ್ನಾಡು ನಿವಾಸಿ ಅಬ್ದುಲ್ ಮಜೀದ್( 21) ಎಂದು ಗುರುತಿಸಲಾಗಿದೆ.

ಸ್ನ್ಯಾಪ್ ಚ್ಯಾಟ್ ಮೂಲಕ ಪರಿಚಯವಾದ ಪುತ್ತೂರಿನ ಅನ್ಯಕೋಮಿನ ಯುವತಿಯ ಭೇಟಿಯಾಗಲು ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಬಂದಿದ್ದ ರಾಯಚೂರಿನ ಯುವಕ ಹನುಮಂತರಾಯ ಮತ್ತು ಆತನ ಸ್ನೇಹಿತನ ಮೇಲೆ 6 ಜನರಿಂದ ತಂಡವೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆ ನಡೆಸಿದ್ದ ತಂಡದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.