Connect with us

    LATEST NEWS

    ಉಳ್ಳಾಲ – ಹಾಡು ಹಗಲೇ ವ್ಯಕ್ತಿಯೊಬ್ಬರಿಗೆ ಚೂರಿ ಇರಿತ

    ಮಂಗಳೂರು ಅಕ್ಟೋಬರ್ 19: ಹಳೆ ದ್ವೇಷದ ಹಿನ್ನಲೆ ವ್ಯಕ್ತಿಯೊಬ್ಬರ ಮೇಲೆ ಹಾಡು ಹಗಲೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲದ ಛೋಟಾ ರಸ್ತೆಯಲ್ಲಿ ನಡೆದಿದೆ.


    ಹಲ್ಲೆಗೊಳಗಾದ ವ್ಯಕ್ತಿಯನ್ನು ಗ್ಯಾಸ್ ರಿಪೇರಿ ಅಂಗಡಿ ಮಾಲೀಕ ಕರಾಟೆ ಮಾಸ್ಟರ್ ಹರೀಶ್ ಗಾಣಿಗ ಎಂದು ಗುರುತಿಸಲಾಗಿದೆ. ಮೊಗವೀರಪಟ್ನ ನಿವಾಸಿಯೊಬ್ಬನಿಂದ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ಹರೀಶ್ ಗಾಣಿಗರು ಪದೇ ಪದೇ ಪೊಲೀಸರಿಗೆ ದೂರು ನೀಡುತ್ತಿದ್ದು, ಈ ಹಿನ್ನಲೆ ದ್ವೇಷದಿಂದ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸರು ಗಾಯಾಳುವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply