Connect with us

    LATEST NEWS

    ಮಂಗಳೂರಿನ ಸಂತ ಅಗ್ನೇಸ್ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಫ್ಲಾಷ್ ಮಾಬ್ ಡ್ಯಾನ್ಸ್

    ಮಂಗಳೂರಿನ ಸಂತ ಅಗ್ನೇಸ್ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಫ್ಲಾಷ್ ಮಾಬ್ ಡ್ಯಾನ್ಸ್

    ಮಂಗಳೂರು ಜನವರಿ 13: ಮಂಗಳೂರಿನ ಪ್ರಸಿದ್ದ ಸಂತ ಅಗ್ನೇಸ್ ಕಾಲೇಜಿನ ಹಳೆ ವಿಧ್ಯಾರ್ಥಿನಿಯರು ಮಂಗಳೂರಿನಲ್ಲಿ ಪ್ರದರ್ಶಿಸಿದ ಪ್ಲಾಶ್ ಮಾಬ್ ಡ್ಯಾನ್ಸ್ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಮಂಗಳೂರು ಇತಿಹಾಸದಲ್ಲಿ ಯುವತಿಯರಿಗಾಗಿಯೇ ಆರಂಭಗೊಂಡಿದ್ದ ಸಂತ ಆಗ್ನೇಸ್ ವಿಧ್ಯಾಸಂಸ್ಥೆಗೆ ಈಗ 100 ವರ್ಷದ ಸಂಭ್ರಮ.

    ಈ ಹಿನ್ನಲೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಕಾಲೇಜಿನಲ್ಲಿ ಕಲಿತ ಹಳೆ ವಿದ್ಯಾರ್ಥಿನಿಯರು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದರು.

    ಈ ಬಾರಿ ಏನಾದರೂ ಹೊಸತು ಮಾಡಬೇಕೆಂದು ತೀಮಾನಿಸಿದ್ದರು ಅದುವೇ ಫ್ಲಾಶ್ ಮಾಬ್ ಡ್ಯಾನ್ಸ್ .

    ಕಾಲೇಜಿನ ಮುಂಭಾಗದಲ್ಲಿ ಸೇರಿದ ವಿದ್ಯಾರ್ಥಿನಿಯರು ಅಪರಾಹ್ನ ಏಕಾಏಕಿ ರಸ್ತೆಗಿಳಿದು ಫ್ಲಾಷ್ ಮಾಬ್ ಡ್ಯಾನ್ಸ್ ಪ್ರದರ್ಶಿಸಿದರು.

    ಬಾಲಿವುಡ್ ನ ಹಾಡುಗಳಿಗೆ ಹೆಜ್ಜೆಹಾಕಿದ ವಿಧ್ಯಾರ್ಥಿನಿಯರು ನೆರೆದವರನ್ನು ರಂಜಿಸಿದರು. ಇದು ಮಾತ್ರವಲ್ಲದೇ ತುಳುನಾಡಿನ ಹುಲಿಕುಣಿತದ ತಾಸೆಯ ತಾಳಕ್ಕೆ ಹೆಜ್ಜೆ ಹಾಕಿ ಸೈ ಎನಿಸಿದರು.

    ಸಂತ ಅಗ್ನೇಸ್ ಕಾಲೇಜಿನಲ್ಲಿ ಕಲಿತು ಈಗ ಇಳಿವಯಸ್ಸಿನಲ್ಲಿರುವ ಹಳೇ ವಿದ್ಯಾರ್ಥಿನಿಯರೂ ತಮ್ಮ ವಯಸ್ಸನ್ನೂ ಲೆಕ್ಕಿಸದೆ ಏಕಾಎಕಿ ರಸ್ತೆಗಿಳಿದು ಫ್ಲಾಷ್ ಮಾಬ್ ಡ್ಯಾನ್ಸ್ ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

    ವಿದ್ಯಾರ್ಥಿನಿಯರು ಏಕಾಏಕಿ ರಸ್ತೆಗಿಳಿದು ಫ್ಲಾಷ್ ಮಾಬ್ ಡ್ಯಾನ್ಸ್ ಪ್ರದರ್ಶಿಸಿದ ಕಾರಣ ವಾಹನ ಸಂಚಾರಕ್ಕೆ ತಡೆಯುಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

    ಏನಿದು ಫ್ಲಾಶ್ ಮಾಬ್ ಡ್ಯಾನ್ಸ್ ?

    ಸಾರ್ವಜನಿಕ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗುವ ಗುಂಪೇ ಫ್ಲಾಶ್ ಮಾಬ್ ಅಥವಾ ಸ್ಮಾರ್ಟ್ ಮಾಬ್.

    ಕೇರಳದ ಮಲಪುರದಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯರ ಫ್ಲಾಶ್ ಮಾಬ್

    ಇವರು ಮಿತ ಸಮಯದಲ್ಲಿ ಅಸಾಮಾನ್ಯವಾದ ಮತ್ತು ವಿಶಿಷ್ಟವಾದ ಕಾರ್ಯವನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಮನರಂಜನೆ ನೀಡುವುದೇ ಇವರ ಗುರಿ.

    ಇದರಲ್ಲಿ ಮನರಂಜನೆ, ವಿಡಂಬನೆ, ಮತ್ತು ಕಲಾತ್ಮಕ ಅಭಿವ್ಯಕ್ತಿಯ ಉದ್ದೇಶಗಳು ಅಡಕವಾಗಿರುತ್ತವೆ.

    ನಂತರ ತಾವೂ ಮಾಡಿದ ಸಮೂಹ ನೃತ್ಯ, ಅಥವಾ ಇತರ ಮನರಂಜನೆಯ ತುಣುಕುಗಳನ್ನು ಸಾಮಾಜಿಕ ಜಾಲಗಳ ಮೂಲಕ ಪ್ರಸಾರ ಪಡಿಸುತ್ತಾರೆ.

    ರಾಜಕೀಯ,ಪ್ರತಿಭಟನೆ,ವಾಣಿಜ್ಯ ಜಾಹೀರಾತು, ಹೀಗೇ ಅನೇಕ ವಿಷಯಗಳಿಗೆ ಇಂತಹ ಫ್ಲಾಶ್ ಮಾಬ್ ಗಳ ಬಳಕೆಯಾಗುತ್ತದೆ. 2003 ರಲ್ಲಿ ಇದು ಮೊದಲ ಬಾರಿ ಅಮೇರಿಕಾದಲ್ಲಿ ಬಳಕೆಯಾಯಿತು.

    ಭಾರತದಲ್ಲೂ ಇತ್ತಿಚಿನ ದಿನಗಳಲ್ಲಿ ಫ್ಲಾಶ್ ಮಾಬ್ ಭಾರಿ ಪ್ರಚಾರ ಪಡೆಯುತ್ತಿದೆ.

    ಇತ್ತೀಚೆಗೆ ಕೇರಳದ ಮಲಪ್ಪುರಂನಲ್ಲಿ ಏಡ್ಸ್ ಜಾಗೃತಿ ಮೂಡಿಸುವ ಕುರಿತು ಆರೋಗ್ಯ ಇಲಾಖೆ  ಫ್ಲಾಶ್ ಮಾಬ್ ಆಯೋಜಿಸಿತ್ತು. ಇದರಲ್ಲಿ ಮುಸ್ಲೀಂ ಯುವತಿಯರು ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ಫ್ಲಾಶ್ ಮಾಬ್ ನಲ್ಲಿ ಬುರ್ಖಾ ಹಾಗೂ ಜಿನ್ಸ್ ಧರಿಸಿ ಮೂವರು ದಂತ ವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿಗಳು ಮಲಪ್ಪುರಂ ನಗರದ ಮುಖ್ಯ ವೃತ್ತದಲ್ಲಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದರು.

    VIDEO

    Share Information
    Advertisement
    Click to comment

    Leave a Reply

    Your email address will not be published. Required fields are marked *