KARNATAKA
ಹಾವೇರಿಯ ವಸತಿ ಶಾಲೆಯಲ್ಲಿ ನೇಣಿಗೆ ಶರಣಾದ SSLC ವಿದ್ಯಾರ್ಥಿನಿ, ಕಾರಣ ನಿಗೂಢ..!

ಹಾವೇರಿ : SSLC ವಿದ್ಯಾರ್ಥಿನಿಯೋರ್ವಳು ವಸತಿ ಶಾಲೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.
ಹಾವೇರಿ ತಾಲೂಕಿನ ಭರಡಿ ಗ್ರಾಮದ ರೇಖಾ ಗೌಡರ(15) ಆತ್ಮಹತ್ಯೆ ಮಾಡಿಕೊಂಡ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯಾಗಿದ್ದಾಳೆ. ಮೃತ ರೇಖಾ ಗೌಡರ ಬೆಳಗ್ಗೆ ಗೆಳತಿಯರೊಂದಿಗೆ ತಿಂಡಿ ತಿನ್ನಲು ಹೋಗಿದ್ದಾಳೆ. ವಾಪಸ್ ಬಂದು ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಆದರೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿದ್ಯಾರ್ಥಿನಿ ರೇಖಾ ಕಳೆದ ವಾರ ಮನೆಗೆ ಹೋಗಿದ್ದಳು. ಒಂದು ವಾರ ರಜೆ ಮುಗಿಸಿ ಗುರುವಾರ ಶಾಲೆಗೆ ಬಂದಿದ್ದಳು. ಮನೆಯಿಂದ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿ ಎಲ್ಲರ ಜೊತೆಗೆ ಎಂದಿನಂತೆ ಓಡಾಡಿಕೊಂಡು ಓದಿಕೊಂಡು ಚೆನ್ನಾಗಿದ್ದಳು. ಸೋಮವಾರ ಬೆಳಿಗ್ಗೆ ಇನ್ನುಳಿದ ವಿದ್ಯಾರ್ಥಿನಿಯರು ತಿಂಡಿ ತಿನ್ನಲು ಹೋಗಿದ್ದರು. ಇದೆ ವೇಳೆ ತಿಂಡಿ ತಿನ್ನಲು ಹೋಗದೆ ಕೊಠಡಿಯಲ್ಲೆ ರೇಖಾ ಉಳಿದುಕೊಂಡಿದ್ದಳು. ಬಳಿಕ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿನ ಸುದ್ದಿ ಕೇಳಿ ಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ವಸತಿ ನಿಲಯದ ಮುಂದೆ ಮಗಳನ್ನ ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ವಿದ್ಯಾರ್ಥಿನಿ ಸಾವಿನ ಬಗ್ಗೆ ನಿಖರ ಕಾರಣ ಗೊತ್ತಾಗಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಬ್ಯಾಡಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
