UDUPI
ಗಣಿತ ಪರೀಕ್ಷೆ ದಿನ ವಿಧ್ಯಾರ್ಥಿಗಳೊಂದಿಗೆ ಧರ್ಮಗುರುಗಳ ಪ್ರಾರ್ಥನೆ
ಉಡುಪಿ ಜೂನ್ 27: ಎಸ್ ಎಸ್ ಎಲ್ ಸಿ ಪರೀಕ್ಷೆಯ ಸರಣಿಯಲ್ಲಿ ಇಂದು ಗಣಿತ ಪರೀಕ್ಷೆ ನಡೆದಿದೆ. ಗಣಿತ ಅಂದ್ರೆ ಕಬ್ಬಿಣದ ಕಡಲೆ ಅನ್ನೋ ಮಾತಿದೆ. ಅದ್ರಲ್ಲೂ ಲಾಕ್ ಡೌನ್, ಕೊರೋನಾ ನಡುವೆ ಈ ಬಾರಿ ಮಕ್ಕಳು ಕೂಡಾ ಹೈರಾಣಾಗಿ ಹೋಗಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸೈಂಟ್ ಅಂಥೋನಿ ಇಂಗ್ಲೀಷ್ ಮೀಡಿಯಂ ಪರೀಕ್ಷೆಗೆ ಹೊರಟ ಮಕ್ಕಳಿಗೆ ಧೈರ್ಯ ಮತ್ತು ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದೆ.
ಧರ್ಮ ಗುರುಗಳು ವಿದ್ಯಾರ್ಥಿಗಳನ್ನು ನಿಲ್ಲಿಸಿ ಪ್ರಾರ್ಥನೆ ಮಾಡಿಸಿದ್ದಾರೆ. ಸಾಮಾಜಿಕ ಅಂತರವಿಟ್ಟು ಶಾಲಾ ಮೈದಾನದಲ್ಲಿ ಮಕ್ಕಳನ್ನು ನಿಲ್ಲಿಸಿ ಭಯವಿಲ್ಲದೆ ಪರೀಕ್ಷೆ ಬರೆಯಿರಿ, ಯಾವುದೇ ಆತಂಕ ಬೇಡ ದೇವರ ಕೃಪೆಯಿರಲಿ.. ಓದಿದೆಲ್ಲ ನೆನಪಿಗೆ ಬರಲಿ ಎಂದು ಧರ್ಮಗುರುಗಳು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹಾರೈಸಿ ಭಗವಂತನಲ್ಲಿ ಪ್ರಾರ್ಥನೆ ಮಾಡಿದರು. ಪ್ರಾರ್ಥನಾ ವಿಧಿ ನಂತರ ಮಕ್ಕಳು ಆಯಾಯ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆದಿದ್ದಾರೆ.