DAKSHINA KANNADA
ಪುತ್ತೂರು – ಶ್ರೀನಿವಾಸ-ಪದ್ಮಾವತಿ `ಕಲ್ಯಾಣೋತ್ಸವ ಲೀಲೆ’ ಕಂಡು ಪುನೀತರಾದ ಭಕ್ತರು
ಪುತ್ತೂರು ಡಿಸೆಂಬರ್ 30: ತಿರುಪತಿ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವವು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಎದುರಿನ ದೇವರಮಾರು ಗದ್ದೆಯಲ್ಲಿ ನಿರ್ಮಿಸಲಾದ ಈಶ ಮಂಟಪದಲ್ಲಿ ರವಿವಾರ ಸಂಜೆಯ ಸುಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ನಡೆಯಿತು.
ಶ್ರೀನಿವಾಸ-ಪದ್ಮಾವತಿಯರ ಕಲ್ಯಾಣ ಮಹೋತ್ಸವದ ಮರುಸೃಷ್ಟಿ ನೆರೆದ ಸಹಸ್ರಾರು ಭಕ್ತರನ್ನು ಭಕ್ತಿ, ಭಾವ ಪರವಶರನ್ನಾಗಿಸಿತು. ಶನಿವಾರ ಸಂಜೆ ಶೋಭಾಯಾತ್ರೆಯ ಮೂಲಕ ಈಶ ಮಂಟಪಕ್ಕೆ ಪ್ರವೇಶ ಮಾಡಿದ್ದ ಶ್ರೀನಿವಾಸ ದೇವರು, 24 ಗಂಟೆಗಳ ಕಾಲ ವಿವಿಧ ಪೂಜಾರ್ಚನೆ ಸ್ವೀಕರಿಸಿದ ಬಳಿಕ ರವಿವಾರ ಸಂಜೆ ಕಲ್ಯಾಣೋತ್ಸವದ ಅಮೃತ ಘಳಿಗೆಯಲ್ಲಿ ಜತೆಯಾದರು.
ನೆರೆದ ಭಕ್ತರು ಕಲ್ಯಾಣ ಮಹೋತ್ಸವದ ಭೋಜನದ ಜತೆಯಲ್ಲಿ ಏಳು ಬೆಟ್ಟದೊಡೆಯನ ಪೂಜೆಯ ಪ್ರಸಾದವನ್ನೂ ಸವಿದು ಕೃತಾರ್ಥರಾದರು.
ರಾಜಾ ಹೋಮ, ಕಾಶಿಯಾತ್ರೆ ವಿಧಿ, ದಿಬ್ಬಣ ಆಗಮನ, ದಿಬ್ಬಣ ಸ್ವಾಗತ, ಗಣಪತಿ ಪೂಜೆ, ಲಕ್ಷ್ಮೀ ಪದ್ಮಾವತಿ ಪೂಜೆ, ಶ್ರೀ ವೆಂಕಟರಮಣ ಪೂಜೆ, ಕಲ್ಯಾಣ ಶ್ರವಣ, ಸಂಕೀರ್ತನ ಸೇವೆ, ವಧು ನಿರೀಕ್ಷಣ, ಕನ್ಯಾದಾನ, ಕಂಕಣ ಧಾರಣೆ, ಹಾರಾರ್ಪಣೆ, ಮಾಂಗಲ್ಯ ಪೂಜೆ, ಮಾಂಗಲ್ಯ ಧಾರಣೆ, ಅಕ್ಷತಾರೋಣ ಸೇವೆ, ನಾದೋಪಾಸನಾ ಸೇವೆ, ಮಾಲಾಧಾರಣ ಸೇವೆ, ಉಡುಗೊರೆ ಸೇವೆ, ಅಷ್ಟಾವಧಾನ ಸೇವೆ, ಲೀಲಾ ವಿನೋದ ಸೇವೆಯೂ ಭಕ್ತರ ಗಮನಸೆಳೆಯಿತು