LATEST NEWS
ಶ್ರೀಲಂಕಾ ಅಧ್ಯಕ್ಷರ ಮನೆ ವಶಕ್ಕೆ ಪಡೆದ ಪ್ರತಿಭಟನಾಕಾರರು….ಮನೆ ಬಿಟ್ಟು ಪರಾರಿಯಾದ ಗೊಟಬಯ ರಾಜಪಕ್ಸ

ಶ್ರೀಲಂಕಾ ಜುಲೈ : ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಶ್ರೀಲಂಕಾದಲ್ಲಿ ಇದೀಗ ಅರಾಜಕತೆ ಮುಗಿಲು ಮುಟ್ಟಿದ್ದು, ಶ್ರೀಲಂಕಾ ಜನರ ಆಕ್ರೋಶಕ್ಕ ಇಂದು ನಡೆದ ಪ್ರತಿಭಟನೆಯಲ್ಲಿ ಜನರು ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ರ್‍ಯಾಲಿ ನಡೆಸಿದ ಪ್ರತಿಭಟನಾಕಾರರು ಅವರ ಮನೆಯ ಕಂಪೌಂಡ್‌ಗೆ ದಾಂಗುಡಿ ಇಟ್ಟಿದ್ದರು. ಅಷ್ಟರಲ್ಲಿ ಅವರನ್ನು ಬೆಂಗಾವಲು ಪಡೆ ಮೂಲಕ ಭದ್ರತೆ ನೀಡಿ ಕರೆದೊಯ್ಯಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ಅಧ್ಯಕ್ಷರ ಮನೆಗೆ ನುಗ್ಗುವುದನ್ನು ತಪ್ಪಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಭಾರೀ ಭದ್ರತೆ ಇದ್ದ ಅಧ್ಯಕ್ಷರ ಮನೆಗೆ ಪ್ರತಿಭಟನಾಕಾರರು ನುಗ್ಗಿರುವ ವಿಡಿಯೊವನ್ನೂ ಸಿರಸಾ ಟಿವಿ ಪ್ರಸಾರ ಮಾಡಿದೆ. ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಒಳ ನುಗ್ಗಿರುವ ಪ್ರತಿಭಟನಾಕಾರರು, ಅಧ್ಯಕ್ಷರ ಮನೆಯನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನಕಾರರು ಅಧ್ಯಕ್ಷರ ಮನೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಆಟ ಆಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ.