LATEST NEWS
ಕಾಶೀ ಮಠದಲ್ಲಿ ಭಕ್ತಿ, ಶ್ರದ್ದೆಯ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಚಿತ್ರಗಳು : ಮಂಜು ನೀರೇಶ್ವಾಲ್ಯ
ಮಂಗಳೂರು, ಆ. 12: ಚಾಂದ್ರಮಾನ ಮಾಸದ ಕ್ರಮದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಮಂಗಳವಾರ ಭಕ್ತಿ, ಶ್ರದ್ಧೆಯಿಂದ ಆಚರಿಸಲಾಯಿತು.

ಕೊಂಚಾಡಿ ಕಾಶೀ ಮಠದಲ್ಲಿ ಕಾಶೀ ಮಠಾಧೀಶ ರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಸಂಸ್ಥಾನದಲ್ಲಿ ಆರಾಧಿಸಲ್ಪಡುವ ಶ್ರೀಕೃಷ್ಣದೇವರಿಗೆ ವಿಶೇಷ ಅಲಂಕಾರ ಮಾಡಿದರು.
ಮಧ್ಯಾಹ್ನ ಪೂಜೆಯಬಳಿಕ ಶ್ರೀ ದೇವರಿಗೆ ಪಂಚಾಮೃತ , ಪವಮಾನ ಅಭಿಷೇಕ ತದನಂತರ ಮಹಾಪೂಜೆ ನೆರವೇರಿಸಿ ದರು. ರಾತ್ರಿ 12:೦4 ರ ಶುಭ ಮುಹೂರ್ತದಲ್ಲಿ ” ಅರ್ಘ್ಯ ” ಪ್ರದಾನವು ಶ್ರೀಗಳವರ
ಅಮೃತ ಹಸ್ತಗಳಿಂದ ನೆರವೇರಿತು .
ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಕೃಷ್ಣಾಷ್ಟಮಿ ಆಚರಣೆಗೆ ಅವಕಾಶ ಇಲ್ಲದ ಕಾರಣ ಬಹುತೇಕ ಮನೆಗಳಲ್ಲಿಯೇ ಆಚರಣೆ ನಡೆಯಿತು ಭಜಕರಿಗೆ ಪಾಲ್ಗೊಳ್ಳುವ ಅವಕಾಶವಿರಲಿಲ್ಲ .
ದ.ಕ. ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಸರಳವಾಗಿ ವಿಶೇಷ ಪೂಜೆ ನೆರವೇರಿತು.