DAKSHINA KANNADA
ಶ್ರೀರಾಮನ ಕೈಂಕರ್ಯದಿಂದ ಪ್ರಾಣ ಪ್ರತಿಷ್ಠೆಗೆ ಅರ್ಥ:ಅಯೋಧ್ಯೆಯ ಮಂತ್ರಾಕ್ಷತೆ ಹಂಚಿಕೆ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ.
ಪುತ್ತೂ,ರು, ಡಿಸೆಂಬರ್ 01: ಹಿಂದೂ ಧರ್ಮದಲ್ಲಿ ಗೊಂದಲಗಳಿದ್ದು, ಸ್ವಧರ್ಮಿಯರಿಂದಲೇ ಚಿಂತೆ ಕಾಡುವಂತಾಗಿದೆ. ಈ ನಿಟ್ಟಿನಲ್ಲಿ ಧರ್ಮ- ಧಾರ್ಮಿಕ ಆಚರಣೆಯೊಂದಿಗೆ ಪ್ರತಿಯೊಬ್ಬ ಹಿಂದೂ ಬೆರೆಯಬೇಕಾದ ಅಗತ್ಯವಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ನುಡಿದರು.ಅವರು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸಭಾಮಂದಿರದಲ್ಲಿ ಅಯೋಧ್ಯೆ ರಾಮಜನ್ಮ ಭೂಮಿ ಮಂದಿರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ಶ್ರೀರಾಮ ಪ್ರಾಣಪ್ರತಿಷ್ಠೆ ಅಂಗವಾಗಿ ಅಯೋಧ್ಯೆಯಿಂದ ತರಲಾದ ಮಂತ್ರಾಕ್ಷತೆಯನ್ನು ವಿವಿಧ ತಾಲೂಕುಗಳಿಗೆ ಕಳುಹಿಸಿಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಹಿಂದೂ ಧರ್ಮದಲ್ಲಿ ಮಂತ್ರಾಕ್ಷತೆಗೆ ಬಹಳ ಮಹತ್ವವಿದೆ. ಇದೀಗ ಅಯೋಧ್ಯೆಯಿಂದ ತರಲಾದ ಮಂತ್ರಾಕ್ಷತೆಯನ್ನು ಪ್ರತಿಯೊಬ್ಬ ಹಿಂದೂ ಮನೆಗೆ ತಲುಪಿಸಿ ಶ್ರೀರಾಮ ಕೈಂಕರ್ಯದಲ್ಲಿ ತೊಡಗಿಕೊಂಡಲ್ಲಿ ಶ್ರೀರಾಮನ ಪುನಃ ಪ್ರತಿಷ್ಠೆಗೆ ಅರ್ಥ ಬರುವ ಜತೆಗೆ ಹಿಂದೂ ಧರ್ಮ ಉಜ್ವಲಿಸುತ್ತದೆ ಎಂದು ನುಡಿದರು.
ವಿಶ್ವ ಹಿಂದೂ ಪರಿಷತ್‍ನ ಪ್ರಾಂತ ಪ್ರಮುಖ್ ನ.ಸೀತಾರಾಮ ಮಾತನಾಡಿ, 1528 ರಲ್ಲಿ ಭವ್ಯ ಮಂದಿರವನ್ನು ಹೊರಗಡೆ ಶಕ್ತಿ ನಾಶ ಮಾಡಿದೆ. ರಾಮಮಂದಿರ ಪುನರ್ ನಿರ್ಮಾಣದ ಹೋರಾಟಗಳು ಕೈಗೊಂಡು 496 ವರ್ಷಗಳು ಕಳೆದಿದ್ದರೂ ಹಿಂದೂಗಳ ಸಹನೆ ಶಕ್ತಿಯಾಗಿ ರೂಪುಗೊಂಡಿದೆ. ಆ ಬಳಿಕದ ದಿನಗಳಲ್ಲಿ ಹಿಂದೂ ಧರ್ಮವನ್ನು ಜಗತ್ತು ನೋಡುವ ದೃಷ್ಟಿ ಬದಲಾಯಿತು. ಭಕ್ತರ ಭಾವನೆಗೆ ತಕ್ಕಂತೆ ಸರಕಾರದ ಅನುದಾನವಿಲ್ಲದೆ ಭವ್ಯ ತೀರ್ಥ ಕ್ಷೇತ್ರ ಜಗತ್ತಿನ ತೀರ್ಥ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದ ಅವರು, ಇದೀಗ ಅಯೋಧ್ಯೆಯಿಂದ ತರಲಾದ ಮಂತ್ರಾಕ್ಷತೆ ಪ್ರತಿ ಮನೆ ಮಗೆಗೆ ತಲುಪಿಸುವಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೂಚನೆಯಂತೆ ಒಂದು ಚೌಕಟ್ಟಿನೊಳಗೆ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ವಿನಂತಿಸಿದರು.
ಸಭಾ ಕಾರ್ಯಕ್ರಮದ ಮೊದಲು ವಿವಿಧ ತಾಲೂಕುಗಳಲ್ಲಿ ನಡೆಸುವ ಬೈಠಕ್, ಸಮಾವೇಶದ ಕುರಿತು ಆಯಾ ತಾಲೂಕಿನವರು ತಿಳಿಸಿದರು.
ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಸಂಘ ಸಂಚಾಲಕ ವಿನಯಚಂದ್ರ, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್, ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಅಧ್ಯಕ್ಷ ರವೀಂದ್ರ ಪಿ. .ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಂಚಾ;ಲಕ ಡಾ.ಕೃಷ್ಣ ಪ್ರಸನ್ನ,ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ವೆಂಕಟೇಶ್ ಭಟ್ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.