BELTHANGADI
ನಾಳೆಯಿಂದ ಧರ್ಮಸ್ಥಳ ಯಕ್ಷಾಗಾನ ಮೇಳದ ತಿರುಗಾಟ ಪ್ರಾರಂಭ
ಬೆಳ್ತಂಗಡಿ ಡಿಸೆಂಬರ್ 01: ನಾಳೆ ಡಿಸೆಂಬರ್ 2 ರಿಂದ ಧರ್ಮಸ್ಥಳ ಯಕ್ಷಗಾನ ಮಂಡಳಿಯ ಈ ಸಾಲಿನ ತಿರುಗಾಟ ಪ್ರಾರಂಭಗೊಳ್ಳಲಿದೆ.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಶುಭಾಶೀರ್ವಾದ ಹಾಗೂ ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್ ಶುಭಹಾರೈಕೆಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಈ ಸಾಲಿನ ತಿರುಗಾಟ ಶನಿವಾರ ಆರಂಭಗೊಳ್ಳಲಿದೆ.
ಶನಿವಾರ ಬೆಳಗ್ಗೆ 8.30ಕ್ಕೆ ಮೇಳದ ಶ್ರೀ ಮಹಾಗಣಪತಿ ದೇವರು ಶ್ರೀ ಕ್ಷೇತ್ರದ ಗಣಪತಿ ದೇವಸ್ಥಾನದಲ್ಲಿ ನಡೆಯುವ ಪೂಜೆಯ ಬಳಿಕ ಮೆರವಣಿಗೆಯೊಂದಿಗೆ ಬಂದು ಮಂಜುಕೃಪಾ (ಅಡಿಗರ ಮನೆ)ದಲ್ಲಿ ವಿರಾಜಮಾನರಾಗಲಿದ್ದಾರೆ. ಮಧ್ಯಾಹ್ನ ಗಣಹೋಮ, ಮಹಾಪೂಜೆ ನಡೆಯಲಿದೆ. ಸಂಜೆ ಪೂಜೆಯ ಬಳಿಕ ಸಂಚಾರ ಹೊರಡುವ ಕಾರ್ಯಕ್ರಮ ನಿಗದಿಯಾಗಿರುತ್ತದೆ. ಎಂದು ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆ ಹಾಗೂ ಪುಷ್ಪರಾಜ್ ಶೆಟ್ಟಿ ತಿಳಿಸಿದ್ದಾರೆ.
You must be logged in to post a comment Login