DAKSHINA KANNADA
ಟಿಪ್ಪು ಜಯಂತಿ ವಿಚಾರದಲ್ಲಿ ಸಂಘಪರಿವಾರದ ಜೊತೆ ಸೇರಿ ವಿರೋಧ- ಪ್ರಮೋದ್ ಮುತಾಲಿಕ್
ಟಿಪ್ಪು ಜಯಂತಿ ವಿಚಾರದಲ್ಲಿ ಸಂಘಪರಿವಾರದ ಜೊತೆ ಸೇರಿ ವಿರೋಧ- ಪ್ರಮೋದ್ ಮುತಾಲಿಕ್
ಮಂಗಳೂರು, ಅಕ್ಟೋಬರ್ 30: ರಾಜ್ಯ ಸರಕಾರ ಆಚರಿಸು ಟಿಪ್ಪು ಜಯಂತಿಯನ್ನು ಸಂಘ ಪರಿವಾರದ ಜೊತೆ ಸೇರಿ ವಿರೋಧಿಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸರಕಾರ ಹಠ ಹಿಡಿದು ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟಿದೆ.ಟಿಪ್ಪುವಿ ನ ಮತಾಂಧತೆಯನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇವೆ. ಟಿಪ್ಪುವಿನ ಕ್ರೌರ್ಯದ ಕುರಿತು ಕರಪತ್ರ ಹಂಚಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುವುದಾಗಿ ಹೇಳಿದ ಅವರು ರಾಷ್ಟ್ರಪತಿಗಳು ಇತ್ತೀಚೆಗೆ ತಮ್ಮ ಭಾಷಣದಲ್ಲಿ ಟಿಪ್ಪುವಿನ ಕುರಿತು ಪ್ರಶಂಸೆಯ ಮಾತುಗಳನ್ನಾಡಿರುವುದನ್ನು ವಿರೋಧಿಸುವುದಾಗಿ ಹೇಳಿದ ಅವರು ರಾಷ್ಟ್ರಪತಿಗಳ ಭಾಷಣ ವೇದವಾಕ್ಯವಲ್ಲ, ಸಂವಿಧಾನವೂ ಅಲ್ಲ ಎಂದರು. ರಾಷ್ಟ್ರಪತಿಗಳಿಗೆ ಟಿಪ್ಪುವಿನ ಬಗ್ಗೆ ಅರಿವಿಲ್ಲ ಎಂದರು. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ಪರ್ಧೆ ಮಾಡುವುದು ಖಂಡಿತ ಎಂದ ಅವರು ಬಿಜೆಪಿಯ ಜೊತೆ ಟಿಕೆಟ್ ಗಾಗಿ ಮಾತುಕತೆಯನ್ನು ಈಗಾಗಲೇ ನಡೆಸಿದ್ದೇನೆ. ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ. ಶಿವಸೇನೆ ತನ್ನ ಸಂಪರ್ಕದಲ್ಲಿದ್ದು, ಕರ್ನಾಟಕದಲ್ಲಿ ಶಿವಸೇನೆಯನ್ನು ರಚಿಸುವ ಕುರಿತು ಮಾತುಕತೆಗಳು ನಡೆದಿದೆ. ಮುಂದಿನ ವಾರ ಈ ಕುರಿತು ಶಿವಸೇನೆಯ ಪ್ರಮುಖರಾದ ಉದ್ಭವ್ ಠಾಕ್ರೆ ಜೊತೆ ಮಾತುಕತೆ ನಡೆಸಲಾಗುವುದು ಎಂದರು. ರಾಜ್ಯದಲ್ಲಿ ಈಗಾಗಲೇ ಐದು ಕ್ಷೇತ್ರಗಳನ್ನು ಗುರುತಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.