LATEST NEWS
ಅಪ್ಘಾನಿಸ್ತಾನದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಾಸರಗೋಡು ಮೂಲದ ಕ್ರೈಸ್ತ ಸನ್ಯಾಸಿನಿ

ಮಂಗಳೂರು ಅಗಸ್ಟ್ 20: ತಾಲಿಬಾನ್ ಗಳ ವಶದಲ್ಲಿರುವ ಅಪ್ಘಾನಿಸ್ತಾನದಿಂದ ಮರಳಿ ಭಾರತಕ್ಕೆ ಬರಲಾರದೇ ಮಂಗಳೂರು ಮೂಲದ ಕ್ರೈಸ್ತ ಸನ್ಯಾಸಿನಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ..ಮೂಲತಃ ಕಾಸರಗೋಡು ಜಿಲ್ಲೆಯ ಬೇಲ ನಿವಾಸಿಯಾಗಿರುವ ಥೆರೆಸಾ ಅವರು ಮೂರು ವರ್ಷಗಳ ಹಿಂದೆ ವಿಶೇಷ ಚೇತನ ಮಕ್ಕಳ ಆರೈಕೆ ಮಾಡಲು ಅಫ್ಘಾನಿಸ್ತಾನಕ್ಕೆ ತೆರಳಿದ್ದರು. ಇಟಲಿ ಮೂಲದ ಎನ್ಜಿಒನಲ್ಲಿ ಸನ್ಯಾಸಿನಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಮೂರು ವರ್ಷಗಳ ಹಿಂದೆ ಕಾಬೂಲಿಗೆ ತೆರಳಿದ್ದರು.
ಇತರ ಪಾಕಿಸ್ತಾನಿ ಮೂಲದ ಸಿಸ್ಟರ್ಗಳ ಜೊತೆ ಥೆರೆಸಾ ಅಲ್ಲಿದ್ದರು.ಆದರೆ, ಈಗ ತಾಲಿಬಾನಿಗಳು ಅಲ್ಲಿನ ಸರಕಾರವನ್ನು ಕಿತ್ತೊಗೆದು ಅಧಿಕಾರಕ್ಕೇರುತ್ತಿದ್ದಂತೆ ಅವರೀಗ ಮರಳಿ ಬರಲಾಗದೆ ಆತಂಕದಲ್ಲಿದ್ದಾರೆ. ಕಾಬೂಲ್ನ ವಿಮಾನ ನಿಲ್ದಾಣದ ಬಳಿಯಲ್ಲೇ ಸಿಸ್ಟರ್ ಥೆರೆಸಾ ಕ್ರಾಸ್ತಾ ಇದ್ದಾರೆಂಬ ಮಾಹಿತಿ ಇದೆ. ಆದರೆ, ಆಶ್ರಮದಿಂದ ಹೊರಗೆ ಬರುವಂತೆ ಇಲ್ಲ. ಹೊರಗೆ ಏನಾಗುತ್ತಿದೆ ಎಂದು ನೋಡುವುದಕ್ಕೂ ಸಾಧ್ಯವಾಗದ ಸ್ಥಿತಿಯಿದೆ.30 ಜನ ಅನಾಥ ವಿಶೇಷ ಚೇತನ ಮಕ್ಕಳ ರಕ್ಷಣೆ ಮತ್ತು ಪಾಲನೆಯ ಹೊಣೆ ಹೊತ್ತಿರುವ ಅವರು ಅಲ್ಲಿಂದ ಹೇಗೆ ಬರುವುದು ಎನ್ನುವ ಚಿಂತೆಯಲ್ಲಿದ್ದಾರೆ. ಥೆರೆಸಾ ಕ್ರಾಸ್ತಾ ಇರುವ ಕಟ್ಟಡದ ಹೊರಭಾಗದಲ್ಲಿ ಮಿಲಿಟರಿ ಸೆಕ್ಯುರಿಟಿ ಇದೆ. ಹಾಗಾಗಿ ಹೊರಗೆ ಹೋಗುವುದು ಸಾಧ್ಯವಿಲ್ಲ.
ಸದ್ಯಕ್ಕೆ ಸುರಕ್ಷಿತವಾಗಿರುವುದಾಗಿ ಮಂಗಳೂರಿನ ಡಯಾಸಿಸ್ಗೆ ಥೆರೆಸಾ ತಿಳಿಸಿದ್ದಾರೆ. ಥೆರೆಸಾ ತಂಗಿಯರು ಕೂಡ ಮಂಗಳೂರಿನಲ್ಲಿ ಸಿಸ್ಟರ್ ಆಗಿ ಕಾರ್ಯ ನಡೆಸುತ್ತಿದ್ದಾರೆ.
