Connect with us

LATEST NEWS

ಆಕ್ರೋಶಕ್ಕೆ ಮಣಿದ ಪಿಣರಾಯಿ ವಿಜಯನ್ ಸರಕಾರ – ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ಗೆ ಅವಕಾಶ

ತಿರುವನಂತಪುರಂಃ ಅಕ್ಟೋಬರ್ 15: ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ನಿಲ್ಲಿಸಿದ್ದ ಕೇರಳ ಸರಕಾರ ಭಾರೀ ಆಕ್ರೋಶದ ಬಳಿ ಇದೀಗ ತನ್ನ ನಿಲುವನ್ನು ಬದಲಿಸಿದ್ದು, ಶಬರಿಮಲೆಯಲ್ಲಿ ಸ್ಪಾಟ್ ಬುಕಿಂಗ್ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.


ಕೇರಳದ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ವಿ. ಜಾಯ್ ಅವರ ಮನವಿಗೆ ಉತ್ತರಿಸುವಾಗ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಪ್ರಕಟಿಸಿದರು. ಎಂದಿನಂತೆ ಆನ್ಲೈನ್ ಹಾಗೂ ಸ್ಪಾಟ್ ಬುಕ್ಕಿಂಗ ಎರಡೂ ಶಬರಿಮಲೆಯಲ್ಲಿ ಇರಲಿದೆ.


ಕಳೆದ ವರ್ಷ, ಆನ್ಲೈನ್ ನೋಂದಣಿ ಮಾಡದೆ ಮತ್ತು ಈ ವ್ಯವಸ್ಥೆಯ ಬಗ್ಗೆ ತಿಳಿಯದೆ ಬಂದ ಭಕ್ತರಿಗೆ ದರ್ಶನವನ್ನು ಖಾತ್ರಿಪಡಿಸಲಾಗಿತ್ತು. “2024-25 ಮಂಡಲಾ ಮಕರ ವಿಲಕ್ಕು ಋತುವಿನಲ್ಲಿ, ವರ್ಚುವಲ್ ಸಾಲಿನಲ್ಲಿ ನೋಂದಾಯಿಸಿಕೊಳ್ಳುವವರಿಗೆ ಮತ್ತು ನೋಂದಾಯಿಸದ ಯಾತ್ರಾರ್ಥಿಗಳಿಗೆ ಸುಗಮ ದರ್ಶನ ಸೌಲಭ್ಯವನ್ನು ಸರ್ಕಾರ ಖಚಿತಪಡಿಸುತ್ತದೆ” ಎಂದು ಮುಖ್ಯಮಂತ್ರಿ ಹೇಳಿದರು.
ಯಾತ್ರಾರ್ಥಿಗಳಿಗೆ ಅನುಕೂಲಕರ ಮತ್ತು ಸುರಕ್ಷಿತ ರೀತಿಯಲ್ಲಿ ಸೌಲಭ್ಯಗಳನ್ನು ಖಾತ್ರಿಪಡಿಸಲು ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸ್ಪಾಟ್ ಬುಕಿಂಗ್ ವಿವಾದದಲ್ಲಿ ಶಬರಿಮಲೆ ಮತ್ತೆ ಸಂಘರ್ಷ ವಲಯವಾಗಬಹುದು ಎಂದು ಗುಪ್ತಚರ ವರದಿಯು ಎಚ್ಚರಿಸಿದೆ. ವಿವಿಧ ಸಂಘಟನೆಗಳು ಶಬರಿಮಲೆಯನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿವೆ ಮತ್ತು ಇದು ಸರ್ಕಾರಕ್ಕೆ ಹಿನ್ನಡೆಯಾಗಲಿದೆ ಎಂದು ವರದಿ ಹೇಳಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *