Connect with us

    UDUPI

    ಒತ್ತಡ ಕಡಿಮೆಗೆ ಕ್ರೀಡೆ ಉತ್ತಮ : ಡಾ.ಉಮೇಶ್ ಪ್ರಭು

    ಉಡುಪಿ, ಸೆಪ್ಟೆಂಬರ್ 12: ದೈನಂದಿನ ಜೀವನದಲ್ಲಿ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರೀಕರಿಗೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ಸಹಾಯಕವಾಗುತ್ತವೆ ಎಂದು ಉಡುಪಿ ರೆಡ್ ಕ್ರಾಸ್ ನ ಅಧ್ಯಕ್ಷ ಡಾ. ಉಮೇಶ್ ಪ್ರಭು ತಿಳಿಸಿದ್ದಾರೆ.
    ಅವರು ಮಂಗಳವಾರ ಉಡುಪಿಯ ರೆಡ್ ಕ್ರಾಸ್ ಭವನದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಆಯೋಜಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ, ಜಿಲ್ಲೆಯ ಹಿರಿಯ ನಾಗರೀಕರಿಗೆ ಏರ್ಪಡಿಸಿದ್ದ ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ತೀರ್ಪುಗಾರರಿಗೆ ಕ್ರೀಡಾ ಸಲಕರಣೆ ವಿತರಿಸಿ ಮಾತನಾಡಿದರು.
    ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಅಗತ್ಯ ಎಂದು ಉಮೇಶ್ ಪ್ರಭು ಹೇಳಿದರು.
    ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್, ಕ್ರೀಡಾಕೂಟದ ತೀರ್ಪುಗಾರರಾದ ಸೋಮಪ್ಪ ತಿಂಗಳಾಯ, ರವಿ ಪ್ರಸಾದ್ ಹಾಗೂ ಹಿರಿಯ ನಾಗರೀಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply