LATEST NEWS
ಪೈಲೆಟ್ ಅನಾರೋಗ್ಯ ಹಾರಾಟ ನಡೆಸದ ಸ್ಪೈಸ್ ಜೆಟ್ ವಿಮಾನ

ಪೈಲೆಟ್ ಅನಾರೋಗ್ಯ ಹಾರಾಟ ನಡೆಸದ ಸ್ಪೈಸ್ ಜೆಟ್ ವಿಮಾನ
ಮಂಗಳೂರು ಅಗಸ್ಟ್ 1: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಡರಾತ್ರಿ ದುಬೈಗೆ ತೆರಳಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನ ಹಾರಾಟ ಪೈಲೆಟ್ ಅನಾರೋಗ್ಯ ಕಾರಣದಿಂದ ರದ್ದಾದ ಘಟನೆ ನಡೆದಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ವಿಮಾನ ನಿನ್ನೆ ರಾತ್ರಿ 12.45 ಕ್ಕೆ ದುಬೈಗೆ ಹಾರಾಟ ನಡೆಸಬೇಕಾಗಿತ್ತು. ಆದರೆ ಪೈಲೆಟ್ ಗೆ ಅನಾರೋಗ್ಯ ಕಾಡಿದ್ದರಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ನಡೆಸದೇ ಮಂಗಳೂರು ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿದೆ.

ವಿಮಾನ ಪ್ರಯಾಣ ರದ್ದಾದ ಹಿನ್ನಲೆಯಲ್ಲಿ ಸುಮಾರು 188 ಪ್ರಯಾಣಿಕರು ಅತಂತ್ರರಾಗಿದ್ದು, ಸ್ಪೈಸ್ ಜೆಟ್ ಪ್ರಯಾಣಿಕರಿಗೆ ಹೋಟೆಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದೆ. ಹಲವು ಪ್ರಯಾಣಿಕರು ಈಗಾಗಲೇ ವಿಮಾನದ ಟಿಕೆಟ್ ನ್ನು ರದ್ದುಗೊಳಿಸಿದ್ದಾರೆ.
ಈ ನಡುವೆ ಇಂದು ಬೆಳಿಗ್ಗೆ 7 ಗಂಟೆಗೆ ಮತ್ತೆ ಪ್ರಯಾಣ ಬೆಳೆಸುವ ಸಿದ್ಧತೆ ನಡೆಸಲಾಗಿತ್ತು ಆದರೆ, ಪೈಲೆಟ್ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದರಿಂದ ಬೆಳಗ್ಗಿನ ಪ್ರಯಾಣವೂ ಕ್ಯಾನ್ಸಲ್ ಆಗಿದೆ. ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ನಿಂತಿರುವ ಸ್ಪೈಸ್ ಜೆಟ್ ವಿಮಾನ, ಸಂಜೆ ಹೊತ್ತಿಗೆ ಮತ್ತೆ ದುಬೈಗೆ ಹಾರಾಟ ನಡೆಸಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.