LATEST NEWS
ಅಯೋಧ್ಯೆ ತೀರ್ಪು ಶಾಂತಿ ಕಾಪಾಡಲು ದಕ್ಷಿಣಕನ್ನಡ ಜಿಲ್ಲೆ ಪೊಲೀಸರಿಗೆ ವಿಶೇಷ ತರಭೇತಿ

ಅಯೋಧ್ಯೆ ತೀರ್ಪು ಶಾಂತಿ ಕಾಪಾಡಲು ದಕ್ಷಿಣಕನ್ನಡ ಜಿಲ್ಲೆ ಪೊಲೀಸರಿಗೆ ವಿಶೇಷ ತರಭೇತಿ
ಮಂಗಳೂರು ನವೆಂಬರ್ 7: ರಾಮಜನ್ಮ ಭೂಮಿ ಕುರಿತಂತೆ ಅತೀ ವಿವಾದಿತ ಆಯೋಧ್ಯೆ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಈ ನಿಟ್ಟಿನಲ್ಲಿ ದೇಶದಾದ್ಯಂತ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ಈಗಾಗಲೇ ಸನ್ನದ್ಧವಾಗಿದೆ.
ಈ ನಡುವೆ ಕೋಮು ಸೂಕ್ಷ್ಮ ಪ್ರದೇಶ ಎಂದೇ ಗುರುತಿಸಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಾಮಜನ್ಮಭೂಮಿ ತೀರ್ಪಿನ ಹಿನ್ನಲೆಯಲ್ಲಿ ಪೋಲೀಸ್ ಪಡೆ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತನ್ನ ಕಾರ್ಯಾಚರಣೆಯ ಕುರಿತು ಕವಾಯತನ್ನೂ ನಡೆಸಿದೆ.
ಬಂಟ್ವಾಳದಲ್ಲಿ ಜಿಲ್ಲೆಯ ವಿವಿಧ ಪೋಲೀಸ್ ಠಾಣೆಯ ಸಿಬ್ಬಂದಿಗಳಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತರಭೇತಿಯನ್ನೂ ನೀಡಲಾಗಿದೆ. ಗುಂಪು ಘರ್ಷಣೆಗಳನ್ನು ತಡೆಯುವ, ಗುಂಪನ್ನು ಚದುರಿಸುವ ಹಾಗೂ ಅಶ್ರುವಾಯು ಸಿಡಿಸುವ ಕುರಿತಂತೆ ತರಭೇತಿಯನ್ನು ನೀಡಲಾಗಿದೆ.

ಆಯೋಧ್ಯೆ ರಾಮಮಂದಿರ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ಎಲ್ಲಾ ಪಕ್ಷಗಳ ವಿಚಾರಣೆ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ತೀರ್ಪು ಹೊರ ಬರಲಿದೆ. ಈ ನಿಟ್ಟಿನಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಕೈಗೊಳ್ಳುವಂತೆ ಎಲ್ಲಾ ಪೋಲೀಸ್ ಠಾಣೆಗಳಿಗೂ ಆದೇಶವೂ ದೊರತಿದ್ದು, ಕೆಲವು ಕಡೆಗಳಲ್ಲಿ ರಾತ್ರಿ ಸಮಯದಲ್ಲಿ ನಾಕಾಬಂಧಿಯನ್ನೂ ಏರ್ಪಡಿಸಲಾಗಿದೆ.