Connect with us

    LATEST NEWS

    ಯುವತಿಯರೊಂದಿಗೆ ಸರಸ ವಿಡಿಯೋ ವೈರಲ್ – ಕನ್ಯಾಕುಮಾರಿ ಚರ್ಚ್ ಪಾದ್ರಿ ಬೆಂಗಳೂರಿನಲ್ಲಿ ಅರೆಸ್ಟ್

    ಚೆನ್ನೈ ಮಾರ್ಚ್ 20: ಯುವತಿಯರೊಂದಿಗೆ ಸರಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ತಮಿಳುನಾಡಿನ ಕನ್ಯಾಕುಮಾರಿ ಚರ್ಚ್ ಒಂದರ ಯುವ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.


    ಬಂಧಿತನನ್ನು ಕನ್ಯಾಕುಮಾರಿ ಬಳಿಯ ತಾಕಳಾ ಚರ್ಚ್‌ನ 29 ವರ್ಷದ ಯುವ ಪಾದ್ರಿ ಬೆನ್ಡಿಕ್ಟ್ ಆಂಟೊ ಎಂದು ಗುರುತಿಸಲಾಗಿದೆ. ಬೆನ್ಡಿಕ್ಟ್ ಆಂಟೊ ಲ್ಯಾಪ್‌ಟಾಪ್‌ನಿಂದ ಆಸ್ಟಿನ್ ಎನ್ನುವ ಸ್ನೇಹಿತನೊಬ್ಬ ಅವರ ಖಾಸಗಿ ವಿಡಿಯೊ ಮತ್ತು ಫೋಟೊಗಳನ್ನು ಕದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ.

    ಇಬ್ಬರ ವಿರುದ್ಧ ಸಂತ್ರಸ್ತ ಯುವತಿ ನಾಗರ್‌ಕೋಯಿಲ್‌ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಬೆಳಕಿಗೆ ಬಂದ ಮೇಲೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬೆನ್ಡಿಕ್ಟ್ ಆಂಟೊನನ್ನು ಕನ್ಯಾಕುಮಾರಿ ಪೊಲೀಸರು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply