Connect with us

LATEST NEWS

ನೀಲಾವರ ಗೋಶಾಲೆಯಲ್ಲಿ ಬೈಹುಲ್ಲಿನ‌ ಗಣಪತಿ

ಉಡುಪಿ : ನೀಲಾವರ ಗೋಶಾಲೆಯಲ್ಲಿನ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗಣೇಶ ಚತುರ್ಥಿಯನ್ನು ವಿಶೇಷವಾಗಿ ಆಚರಿಸಿದರು .

ತಮ್ಮ ವಿದ್ಯಾರ್ಥಿಗಳು ಬೈಹುಲ್ಲನ್ನು ( ಭತ್ತದ ಒಣಹುಲ್ಲು) ಬಳಸಿಕೊಂಡು ರಚಿಸಿದ ಗಣಪತಿ ಹಾಗೂ ರಾಜ್ಯ ಪರಿಸರ ಇಲಾಖೆ ಸೂಚಿಸಿದಂತೆ ಅರಶಿನ ಹುಡಿಯಲ್ಲಿ ಚಿಕ್ಕ ಗಣಪತಿ ವಿಗ್ರಹ ಸಿದ್ಧಪಡಿಸಿ ಅದಕ್ಕೆ ಸುಂದರ ಅಲಂಕಾರಗಳನ್ನು ಮಾಡಿ ಗಜಮುಖನ ಆರಾಧಿಸಿದರು. ಗಣಯಾಗವೂ ವೈದಿಕರಿಂದ ನಡೆಯಿತು .

ಮಹಾಪೂಜೆಯನ್ನು ಶ್ರೀಗಳು ನೆರವೇರಿಸಿ , ಕೊರೊನಾ ಮಾರಕ ರೋಗದಿಂದ ಮುಕ್ತಿ ದೊರೆತು ಲೋಕಕ್ಷೇಮವಾಗಲಿ , ಸಮಸ್ತ ಗೋ ಕುಲಕ್ಕೆ ಸುರಕ್ಷೆ ಸಮೃದ್ಧಿ ಹಾಗೂ ಅಯೋಧ್ಯೆ ರಾಮಮಂದಿರವು ನಿರ್ವಿಘ್ನವಾಗಿ ನೆರವೇರಲೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು . ಬುಧವಾರ ಈ ಗಣಪನ‌ ವಿಗ್ರಹ ವಿಸರ್ಜನೆ ನಡೆಯಲಿದೆ .ಎಂದು ಮಠದ ಪ್ರಕಟಣೆ ತಿಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *