Connect with us

    UDUPI

    ಪರಿಶಿಷ್ಟ ಜಾತಿ,ಪಂಗಡ, ಹಿಂದುಳಿದ ವರ್ಗದವರಿಗೆ ವಿವಿಧ ಸೌಲಭ್ಯ- ಪ್ರಮೋದ್

    ಪರಿಶಿಷ್ಟ ಜಾತಿ,ಪಂಗಡ, ಹಿಂದುಳಿದ ವರ್ಗದವರಿಗೆ ವಿವಿಧ ಸೌಲಭ್ಯ- ಪ್ರಮೋದ್

    ಉಡುಪಿ, ಅಕ್ಟೋಬರ್ 21: ಉಡುಪಿ ನಗರಸಭೆವತಿಯಿಂದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನರಿಗೆ 1 ಕೋಟಿ ರೂಪಾಯಿ ಅನುದಾನದಡಿಯಲ್ಲಿ ವಿದ್ಯಾರ್ಥಿ ವೇತನ ಮತ್ತು ವಿವಿಧ ಸೌಲಭ್ಯ ವಿತರಿಸಲಾಗುತ್ತಿದೆ ಎಂದು ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

    ಅವರಿಂದು ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಜನರಿಗೆ ವಿದ್ಯಾರ್ಥಿ ವೇತನ ಹಾಗೂ ವಿವಿಧ ಸವಲತ್ತು ವಿತರಿಸಿ ಮಾತನಾಡಿದರು. ಜನರಿಗೆ ಉತ್ತಮವಾದ ಜೀವನ ನಡೆಸಲು ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸರ್ಕಾರವು ಜನರಿಂದ ತೆರಿಗೆಯ ರೂಪದಲ್ಲಿ ಪಡೆಯುತ್ತಿರುವ ಹಣವನ್ನೇ ಮರು ವಿನಿಯೋಗಿಸುತ್ತಿದ್ದೇವೆ. ಆ ಹಣವನ್ನು ಪಾರದರ್ಶಕವಾಗಿ, ಲೋಪವಾಗದಂತೆ ಅತ್ಯಂತ ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವಂತೆ ಮಾಡುವುದು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಸಚಿವರು ಹೇಳಿದರು.

    ಉಡುಪಿಯಲ್ಲಿ ಕುಡ್ಸೆಂಪ್ ಯೋಜನೆಗಾಗಿ 370 ಕೋಟಿ.ರೂ ಹಣವನ್ನು ಸರ್ಕಾರವು ಈಗಾಗಲೇ ಮಂಜೂರು ಮಾಡಲಾಗಿದ್ದು, ಬಸ್ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ರಸ್ತೆ ವ್ಯವಸ್ಥೆ, ಸೇತುವೆ ವ್ಯವಸ್ಥೆಯನ್ನು ಎಲ್ಲಿ ಬೇಕಾಗಿದೆಯೋ ಅಲ್ಲಿ ಒದಗಿಸುವ ಜವಾಬ್ದಾರಿ ಸರ್ಕಾರದ್ದು ಎಂದು ಹೇಳಿದರು.

    ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನರಿಗೆ 2.4 ಕೋಟಿ.ರೂ ಹಾಗೂ ವಿಶೇಷ ಚೇತನರಿಗೆ ಶೇಕಡಾ 3ರಷ್ಟು ವಿಶೇಷವಾದ ಅನುದಾನವನ್ನು ನೀಡಲಾಗುತ್ತಿದ್ದು, ಎಲ್ಲಾ ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ನರ್ಮ್ ಬಸ್‍ಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ, ದೇಶದ ಎಲ್ಲಾ ಜನರನ್ನು ಸಮಾನವಾಗಿ ಕಾಣಬೇಕು ಎಂದು ಹೇಳಿದರು.

    ಉಡುಪಿ ನಗರಸಭೆಯಲ್ಲಿ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.24.10 ನಿಧಿಯಡಿಯಲ್ಲಿ ವಿವಿಧ ಸವಲತ್ತುಗಳನ್ನು ನೀಡಲು ಒಟ್ಟು 7.05 ಲಕ್ಷ ರೂ ಅನುದಾನವನ್ನು ವಿದ್ಯಾರ್ಥಿವೇತನಕ್ಕಾಗಿ ಕಾಯ್ದಿರಿಸಿದ್ದು, ಅದರಲ್ಲಿ 3.45 ಲಕ್ಷ ರೂ ವಿತರಿಸಲಾಗಿದೆ. ಅಡುಗೆ ಅನಿಲ ಸಂಪರ್ಕಕ್ಕಾಗಿ 1.84 ಲಕ್ಷ, ಶೌಚಾಲಯ ನಿರ್ಮಾಣಕ್ಕಾಗಿ 12 ಲಕ್ಷ ಹಾಗೂ ಆರೋಗ್ಯ ವಿಮೆ ಪ್ರೀಮಿಯಂ ಮೊತ್ತ 50 ಲಕ್ಷ ರೂ. ಒಟ್ಟು 70.89 ಲಕ್ಷ ದಷ್ಟು ಅನುದಾನ ವಿತರಿಸಲಾಗುತ್ತಿದೆ. ಶೇ.7.25ರ ನಿಧಿಯಡಿ ಇತರೆ ಬಡಜನರ ಕಲ್ಯಾಣಕ್ಕಾಗಿ ಒಟ್ಟು 7.95 ಲಕ್ಷ ರೂ ಅನುದಾನವನ್ನು ವಿದ್ಯಾರ್ಥಿವೇತನಕ್ಕಾಗಿ ಕಾಯ್ದಿರಿಸಿದ್ದು, ಅದರಲ್ಲಿ 7.05 ಲಕ್ಷ ರೂ ವಿತರಿಸಲಾಗಿದೆ. ಮನೆ ದುರಸ್ಥಿಗೆ 1.60 ಲಕ್ಷ ರೂ, ಅಡುಗೆ ಅನಿಲ ಸಂಪರ್ಕಕ್ಕಾಗಿ 1.94 ಲಕ್ಷ, ಶೌಚಾಲಯ ನಿರ್ಮಾಣಕ್ಕಾಗಿ 18.12 ಲಕ್ಷ ರೂ. ಒಟ್ಟು 29.61 ಲಕ್ಷ ದಷ್ಟು ಅನುದಾನ ವಿತರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *