LATEST NEWS
ನಮ್ಮ ಮೇಲೆ ಆರೋಪ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ ಕಾನತ್ತೂರು ದೈವ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಲಿ – ಧೀರಜ್ ಜೈನ್

ಮಂಗಳೂರು ಜುಲೈ 01: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ್ದರೂ ಕೆಲವರು ಧರ್ಮಸ್ಥಳ ಕ್ಷೇತ್ರ ಹಾಗೂ ಜೈನ ಸಮುದಾಯದ ವಿರುದ್ಧ ಆರೋಪ ಮಾಡುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಿದ್ಧ ಧರ್ಮಸ್ಥಳ ಕ್ಷೇತ್ರದ ಪ್ರಮುಖರ ವಿರುದ್ಧ ಆರೋಪ ಮಾಡಿ, ಮುಗ್ಧ ಜನರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ವ್ಯಕ್ತಿಯೊಬ್ಬರು ಸಿಬಿಐ ತನಿಖೆ ನಡೆಸುವಾಗ, ಸಾಕ್ಷಿಯ ಹೇಳಿಕೆ ನೀಡಲು ಹಿಂದೇಟು ಹಾಕಿದರು. ಯಾರ ಮೇಲೆ ಆರೋಪ ಮಾಡಲಾಗಿತ್ತೋ ಅವರು ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಈಗ ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಆರೋಪ ಮಾಡುವ ವ್ಯಕ್ತಿಗೆ ನಿಜವಾದ ಕಾಳಜಿ ಇದ್ದರೆ, ನೈಜ ಆರೋಪಿಗಳ ಬಂಧನಕ್ಕೆ ಹಾಗೂ ಪೊಲೀಸ್ ತನಿಖೆಯ ವಿರುದ್ಧ ಧರಣಿ ನಡೆಸಲಿ’ ಎಂದರು.

ಬೆಳ್ತಂಗಡಿಯ ಧೀರಜ್ ಜೈನ್ ಮಾತನಾಡಿ, ‘ನಮ್ಮ ಮೇಲೆ ಆರೋಪ ಮಾಡಿದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಜತೆಗಿದ್ದವರಿಗೆ ಆರೋಪದ ಬಗ್ಗೆ ದೃಢತೆ ಇದ್ದರೆ, ತುಳುನಾಡಿನ ಆರಾಧ್ಯ ಕ್ಷೇತ್ರವಾದ ಕಾನತ್ತೂರು ದೈವ ಕ್ಷೇತ್ರಕ್ಕೆ 10 ದಿನಗಳೊಳಗೆ ಬಂದು ಪ್ರಮಾಣ ಮಾಡಲಿ. ನಾವು ದೈವದ ಸಮ್ಮುಖದಲ್ಲಿ ಪ್ರಮಾಣ ಮಾಡಲು ಸಿದ್ಧರಿದ್ದೇವೆ. ಹಿಂದೆಯೂ ಪ್ರಮಾಣಕ್ಕೆ ಕರೆದಾಗ ಅವರು ಬಂದಿರಲಿಲ್ಲ. ಈಗಲಾದರೂ ಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಲಿ’ ಎಂದು ಸವಾಲು ಹಾಕಿದರು.
https://youtu.be/Zhhc5jPCo7c