Connect with us

  DAKSHINA KANNADA

  ತನ್ನದಲ್ಲದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾದ ಮಂಗಳೂರಿನ ಯುವಕ ಕೊನೆಗೂ ಬಂಧ ಮುಕ್ತ..!

  ಮಂಗಳೂರು : ತನ್ನದಲ್ಲದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾದ ಮಂಗಳೂರಿನ ಯುವಕ ಕೊನೆಗೂ ಬಂಧನಾಗಿ ತಾಯ್ನಾಡಿಗೆ  ಮರಳಿದ್ದಾನೆ.

   

  ಮುಕ್ತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ವಲಸಿಗರೊಬ್ಬರು ಆನ್ಲೈನ್ ವಂಚಕರ ಬಲೆಗೆ ಸಿಲುಕಿ ತನ್ನದಲ್ಲದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸುವ ಮಟ್ಟಕ್ಕೆ ತಲುಪಿ ಅಲ್ಲಿನ ಸಾಮಾಜಿಕ ಕಾರ್ಯಕರ್ತರ ಪರಿಶ್ರಮದಿಂದ ಇದೀಗ ಆರೋಪ ಮುಕ್ತರಾಗಿ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾನೆ.ಮಂಗಳೂರು ಸಮೀಪದ ಹಳೆಯಂಗಡಿ ಎಂಬಲ್ಲಿನ ರಹೀಂ ಎಂಬ ಯುವಕ ಸುಮಾರು ಮೂರು ವರ್ಷಗಳಿಂದ ಸೌದಿ ಅರೇಬಿಯಾದ ತಬೂಕ್ ಎಂಬಲ್ಲಿನ ಗ್ರೀಕ್ ಮೂಲದ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು.

  ನವೆಂಬರ್ 15, 2022 ತಾರೀಕಿನಂದು ಆತನಿಗೆ ಒಂದು ಫೋನ್ ಕರೆ ಬರುತ್ತದೆ, ಆ ಕಡೆಯಿಂದ ಮಾತನಾಡಿ ಅವರು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯದ ಅಧಿಕಾರಿ ಎಂದು ವಿವರಿಸುತ್ತಾ ನಿಮ್ಮ ಇಕಾಮಾ (ರೆಸಿಡೆನ್ಸಿ ಪರ್ಮಿಟ್) ಅವಧಿ ಮುಗಿಯಲಿದೆ ಅದನ್ನು ನವೀಕರಿಸಲೆಂದು ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸುತ್ತಾ ರಹೀಮ್ ಅವರ ಮೊಬೈಲ್ ಗೆ ಸಂದೇಶ ಬಂದಂತಹ ಓಟಿಪಿ ಪಾಸ್ವರ್ಡ್ ಅನ್ನು ಕೇಳಿ ಪಡೆದಿದ್ದರು, ವಂಚಕರ ಬಗ್ಗೆ ಮಾಹಿತಿ ಗೊತ್ತಿಲ್ಲದೆ ಈತನು ನಂಬಿ ಎಲ್ಲಾ ವಿವರಗಳನ್ನು ಅವರ ಜೊತೆ ಹಂಚಿಕೊಂಡಿದ್ದರು.

  ಅದೆಲ್ಲವನ್ನು ಮರೆತು ತನ್ನ ಪಾಡಿಗೆ ಕೆಲಸ ನಿರ್ವಹಿಸಿಕೊಂಡು ಮುಂದುವರಿಸಿದ್ದ ರಹೀಮ್, ರಜೆ ತೆಗೆದುಕೊಂಡು ತನ್ನ ಊರಿಗೆ ಪ್ರಯಾಣ ಬೆಳೆಸಲು ಹೊರಟು ಸೆಪ್ಟೆಂಬರ್ 30, 2023 ರಂದು ಸೌದಿ ಅರೇಬಿಯಾದ ಜಿದ್ದಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ್ದರು

  ಆದರೆ ವಿಮಾನ ನಿಲ್ದಾಣದಲ್ಲಿ ರಹೀಮ್ ಅವರ ಪ್ರಯಾಣವನ್ನು ತಡೆಹಿಡಿದ ಅಧಿಕಾರಿಗಳು ಅವರನ್ನು ತಮ್ಮ ವಶಕ್ಕೆ ಪಡೆದು ಆತ ಕೆಲಸ ಮಾಡಿಕೊಂಡಿದ್ದ ಕಂಪನಿಯನ್ನು ಸಂಪರ್ಕಿಸಿ ರಹೀಮ್ ಅವರ ಮೇಲೆ ಅಕ್ರಮ ಹಣ ವರ್ಗಾವಣೆ, ವಂಚನೆ ಪ್ರಕರಣ ದಾಖಲಾಗಿರುವುದಾಗಿ ಮಾಹಿತಿ ನೀಡುತ್ತಾ, ಅಲ್ಲಿನ ರಾಷ್ಟ್ರೀಯ ಬ್ಯಾಂಕ್ ಖಾತೆಯಿಂದ ಸುಮಾರು ಹದಿನೇಲು ಸಾವಿರ (SAR.17,000) ಸೌದಿ ಅರೇಬಿಯಾ ರೀಯಲ್ ಹಣ ಅಕ್ರಮವಾಗಿ ರಹೀಮ್ ಅವರ ಖಾತೆಯ ಮೂಲಕ ವರ್ಗಾವಣೆಗೊಂಡಿದ್ದು ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ, ಅದುವರೆಗೂ ರಹೀಮ್ ಅವರು ಊರಿಗೆ ಹಿಂದಿರುಗಲು ಅನುಮತಿ ಇಲ್ಲ ಎಂದು ತಿಳಿದು ಬಂತು.

  ದಿಕ್ಕೇ ತೋಚದಂತಾಗಿ ವಾಪಾಸು ಕೆಲಸದತ್ತ ಆಗಮಿಸಿದ ಅವರಿಗೆ ಹಣದ ವಹಿವಾಟಿನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಅದಾಗಿಯೂ ಅವರ ಖಾತೆಯಲ್ಲಿ ಹಣವೂ ಇರಲಿಲ್ಲ, ಹೀಗೆ ಕಣ್ಣೀರಿನೊಂದಿಗೆ ಯೋಚನೆಯಲ್ಲಿ ಮುಳುಗಿದ್ದ ರಹೀಮ್ ಅವರಿಗೆ ಒಂದು ವರ್ಷದ ಹಿಂದಿನ OTP ನೀಡಿದ್ದ ಘಟನೆ ನೆನಪಿಗೆ ಬಂತು. ಅದಾಗಲೇ ತಾನು ಸೈಬರ್-ವಂಚನೆಗೆ ಬಲಿಯಾಗಿರುವುದನ್ನು ಅರಿತುಕೊಂಡರು.

  ಈ ಸಂಬಂಧ ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದೆಷ್ಟೋ ಬಾರಿ ಪೊಲೀಸ್ ಠಾಣೆಗೆ ತೆರಳಿ ಘಟನೆ ಕುರಿತು ಪೊಲೀಸರಿಗೆ ಸ್ಪಷ್ಟ ಹೇಳಿಕೆ ನೀಡಿದ್ದರು.

  ಈ ಬಗ್ಗೆ ತನ್ನೂರಿನವರಾದ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಅವರಿಗೆ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದ ಪರಿಣಾಮ ಸೌದಿ ಅರೇಬಿಯಾದಲ್ಲಿ ಕಾರ್ಯಚರಿಸುತ್ತಿರುವ ಸಾಮಾಜಿಕ ಸಂಘಟನೆಂಯೊಂದರ ಸದಸ್ಯ ನೌಫಲ್ ಮುಲ್ಕಿ ಅವರನ್ನು ಸಂಪರ್ಕಿಸಿ ಸಹಾಯ ಕೇಳಿಕೊಂಡಿದ್ದರು.

  ತಕ್ಷಣ ಕಾರ್ಯ ಪ್ರವರ್ತರಾದ ನೌಫಲ್ ಮುಲ್ಕಿ ಅವರು ಸಮಾಜ ಸೇವಕ ಹಾಗು ವಕೀಲರಾದ ಪಿಎ ಹಮೀದ್ ಪಡುಬಿದ್ರಿ ಅವರ ಸಹಾಯದ ಮೂಲಕ ಕಾನೂನು ಹೋರಾಟ ಮಾಡಿ, ಒಂಬತ್ತು ತಿಂಗಳಿಗೂ ಹೆಚ್ಚು ಅವಧಿಯ ತನಿಖೆಯ ನಂತರ ರಹೀಮ್ ಅವರು ದೋಷಮುಕ್ತರಾಗಿ ಪ್ರಕರಣದಿಂದ ಹೊರಬಂದರು, ಅಲ್ಲದೆ ರಜೆಯ ಮೇಲೆ ಭಾರತಕ್ಕೆ ತೆರಳಲು ಅನುಮತಿಯು ಕೂಡ ನೀಡಲಾಯಿತು.

  ಇದೀಗ ರಹೀಮ್ ಅವರು ಜೂನ್ 27ರಂದು ಹಳೆಯಂಗಡಿಯಲ್ಲಿ ತನ್ನ ಕುಟುಂಬವನ್ನು ಸೇರಿದ್ದು, ಪ್ರಕರಣದಲ್ಲಿ ಕಷ್ಟಪಟ್ಟು ಶ್ರಮಿಸಿ ತಾನು ಕುಟುಂಬವನ್ನು ಸೇರಲು ಅವಕಾಶ ಮಾಡಿಕೊಟ್ಟ ಸಮಾಜ ಸೇವಕರಾದ ವಕೀಲ ಪಿಎ ಹಮೀದ್ ಪಡುಬಿದ್ರಿ, ನೌಫಲ್ ಮುಲ್ಕಿ ಮತ್ತು ಅದ್ದಿ ಬೊಳ್ಳೂರು ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

  ಅಲ್ಲದೆ ಈ ಘಟನೆಯಲ್ಲಿ ತನಗಾದ ಕಹಿ ಅನುಭವವನ್ನು ವ್ಯಕ್ತಪಡಿಸುತ್ತಾ, ಅಪರಿಚಿತ ಕರೆಗಳು ಬಂದಾಗ ಯಾವುದೇ ರೀತಿಯ ಖಾಸಗಿ ಮಾಹಿತಿಯನ್ನು ನೀಡದೆ ಜಾಗರೂತರಾಗಬೇಕು, ವಿದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವಲಸಿಗರಿಗೂ ಈ ಘಟನೆ ಸಂಪೂರ್ಣ ಎಚ್ಚರಿಕೆಯಾಗಲಿ ಎಂದರು

  Share Information
  Advertisement
  Click to comment

  You must be logged in to post a comment Login

  Leave a Reply