Connect with us

    KARNATAKA

    ಟಿಕೆಟ್ ರಹಿತ ಪ್ರಯಾಣಕ್ಕೆ 46.3 ಕೋಟಿ ರೂ.ಗಳ ದಂಡ ವಸೂಲಿ ಮಾಡಿ ನೈರುತ್ಯ ರೈಲ್ವೆ ದಾಖಲೆ..!

    ಹುಬ್ಬಳ್ಳಿ :ನೈರುತ್ಯ ರೈಲ್ವೆಯು ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಹಣಕಾಸು ವರ್ಷದಲ್ಲಿ ಡಿಸೆಂಬರ್ 2023 ರವರೆಗೆ 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.

    ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು 368205 ಪ್ರಕರಣಗಳನ್ನು ದಾಖಲಿಸಿ, 28.26 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.
    ನೈರುತ್ಯ ರೈಲ್ವೆಯ ಟಿಕೆಟ್ ತಪಾಸಣಾ ಸಿಬ್ಬಂದಿ ಈ ಹಣಕಾಸು ವರ್ಷದಲ್ಲಿ ಅಂದರೆ 2023 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಟಿಕೆಟ್ ರಹಿತ ಮತ್ತು ಅನಿಯಮಿತ ಪ್ರಯಾಣವನ್ನು ತಡೆಯಲು ಎಕ್ಸ್ ಪ್ರೆಸ್, ವಿಶೇಷ ರೈಲುಗಳು ಸೇರಿದಂತೆ ಪ್ರಯಾಣಿಕರ ರೈಲು ಸೇವೆಗಳಲ್ಲಿ ಎಲ್ಲಾ ಅಧಿಕೃತ ರೈಲು ಬಳಕೆದಾರರಿಗೆ ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿಶೇಷ ಟಿಕೆಟ್ ತಪಾಸಣಾ ಕಾರ್ಯವನ್ನು ಸದಾ ನಿಯಮಿತವಾಗಿ ನಡೆಸಲಾಗುತ್ತಿದೆ.
    ನೈರುತ್ಯ ರೈಲ್ವೆಯು ಈ ಹಣಕಾಸು ವರ್ಷದಲ್ಲಿ ಡಿಸೆಂಬರ್-2023 ವರೆಗೆ ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿ, 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 9.95% ಹೆಚ್ಚಳವಾಗಿದೆ. ಇದು ನೈರುತ್ಯ ರೈಲ್ವೆ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ದಂಡ ವಸೂಲಿ ಆಗಿದೆ.

    2023 ರ ಡಿಸೆಂಬರ್ ತಿಂಗಳಲ್ಲಿ ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ 72041 ಪ್ರಕರಣಗಳನ್ನು ದಾಖಲಿಸಿ 5.13 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ.
    ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ ವಿಭಾಗವಾರು ದಂಡ ಸಂಗ್ರಹವು ಈ ಕೆಳಗಿನಂತಿದೆ:-
    1. ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು 96790 ಪ್ರಕರಣಗಳನ್ನು ದಾಖಲಿಸಿ 6.36 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.
    2. ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು 368205 ಪ್ರಕರಣಗಳನ್ನು ದಾಖಲಿಸಿ 28.26 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.
    3. ನೈರುತ್ಯ ರೈಲ್ವೆಯ ಮೈಸೂರು ವಿಭಾಗವು 100538 ಪ್ರಕರಣಗಳನ್ನು ದಾಖಲಿಸಿ 5.91 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.
    4. ನೈರುತ್ಯ ರೈಲ್ವೆಯ ಫ್ಲೈಯಿಂಗ್ ಸ್ಕ್ವಾಡ್ (ಕೇಂದ್ರ ಕಚೇರಿ) ವಿಭಾಗವು 61481 ಪ್ರಕರಣಗಳನ್ನು ದಾಖಲಿಸಿ 5.77 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.
    ರೈಲ್ವೆ ಕಾಯ್ದೆ, 1989 ರ ಸೆಕ್ಷನ್ 138 ರ ಪ್ರಕಾರ, ಯಾವುದೇ ಪ್ರಯಾಣಿಕರು ಸರಿಯಾದ ಪಾಸ್ / ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಕಂಡುಬಂದಲ್ಲಿ ₹ 250 ದಂಡ ಅಥವಾ ಶುಲ್ಕಕ್ಕೆ ಸಮನಾಗಿರುತ್ತದೆ (ಅವರು ಪ್ರಯಾಣಿಸಿದ ದೂರಕ್ಕೆ ಅಥವಾ ರೈಲು ಪ್ರಾರಂಭವಾದ ನಿಲ್ದಾಣದಿಂದ ಸಾಮಾನ್ಯ ಏಕ ಶುಲ್ಕ ಮತ್ತು ಹೆಚ್ಚುವರಿ ಶುಲ್ಕಗಳು ಅಂದರೆ ₹ 250) ಯಾವುದು ಹೆಚ್ಚಿದೆಯೋ ಅದನ್ನು ವಿಧಿಸಲಾಗುತ್ತದೆ.
    ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಟಿಕೆಟ್ ತಪಾಸಣೆಯಲ್ಲಿ ಶ್ಲಾಘನೀಯ ಪ್ರಯತ್ನಗಳಿಗಾಗಿ ಟಿಕೆಟ್ ತಪಾಸಣಾ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *