DAKSHINA KANNADA
ಪುತ್ತೂರಿನಲ್ಲಿ ಖಾಕಿ ದರ್ಪ : ಅನಗತ್ಯ ಸೈರನ್ ಹಾಕಿ ನೆಮ್ಮದಿ ಕೆಡಿಸಿದ ಪುತ್ತೂರು ಪೊಲಿಸರು

ಪುತ್ತೂರಿನಲ್ಲಿ ಖಾಕಿ ದರ್ಪ : ಅನಗತ್ಯ ಸೈರನ್ ಹಾಕಿ ನೆಮ್ಮದಿ ಕೆಡಿಸಿದ ಪುತ್ತೂರು ಪೊಲಿಸರು
ಪುತ್ತೂರು, ಜುಲೈ 18 : ಅನಗತ್ಯ ಸೈರನ್ ಬಳಸಿ ತನ್ನ ಅಧಿಕಾರವನ್ನು ಪುತ್ತೂರು ಪೋಲೀಸರು ದುರ್ಬಳಕೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ವಿವೇಕಾನಂದ ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳು ಉಚಿತ ಪಾಸ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಪ್ರತಿಭಟನೆ ಮುಗಿದು ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೋಲೀಸರು ತನ್ನ ಜೀಪ್ ನ ಸೈರನ್ ಅನ್ನು ಅನಗತ್ಯವಾಗಿ ಹಾಕುವ ಮೂಲಕ ಕಿರಿಕಿರಿ ಉಂಟು ಮಾಡಿದ್ದಾರೆ. ಅಷ್ಟಕ್ಕೂ ಅಲ್ಲಿ ಯಾವುದೇ ಅನಾಹುತವೂ ಸಂಭವಿಸಿರಲಿಲ್ಲ.
ಜನಪ್ರತಿನಿಧಿಗಳಂತೆ ಇದೀಗ ಪೋಲೀಸರೂ ಅಗತ್ಯವಲ್ಲದಿದ್ದರೂ ಸೈರನ್ ಬಳಸುವ ಮೂಲಕ ವಿವಿಐಪಿ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದಾರೆ ಎನ್ನುವ ಆರೋಪವೂ ಈ ಘಟನೆಯ ಬಳಿಕ ಕೇಳಿ ಬಂದಿದೆ.
ದೇಶದ ಪ್ರಧಾನ ಮಂತ್ರಿಗಳೇ ತಮ್ಮ ವಾಹನದಲ್ಲಿ ಸೈರನ್ ಬಳಸುತ್ತಿಲ್ಲ ಆದರೆ ಪುತ್ತೂರು ಪೊಲೀಸರು ಮಾತ್ರ ಅನಗತ್ಯವಾಗಿ ಸೈರನ್ ಹಾಕುವ ಮೂಲಕ ತಮ್ಮ ಖಾಕಿ ದರ್ಪ ಮೆರೆಯುವುದರೊಂದಿಗೆ , ಶಬ್ದ ಮಾಲಿನ್ಯವನ್ನೂ ಉಂಟುಮಾಡಿದ್ದಾರೆ.
ತಮ್ಮ ಸಹೋದ್ಯೋಗಿಗಳನ್ನು ಬಿಟ್ಟು ಬರಲು ಸೈರನ್ ಬಳಸಿದ ಪುತ್ತೂರು ಪೋಲೀಸರ ವಿರುದ್ಧ ವಿದ್ಯಾರ್ಥಿಗಳು ಹಿಡಿಶಾಪವನ್ನು ಹಾಕಿ ತೆರಳುತ್ತಿದ್ದ ದೃಶ್ಯವೂ ಸ್ಥಳದಲ್ಲಿ ಕಂಡುಬಂದಿತ್ತು.
ವಿಡಿಯೋಗಾಗಿ …