LATEST NEWS
ವಿದ್ಯಾರ್ಥಿ ಕೊಲೆ ಪ್ರಕರಣ : ಪಿಎಫ್ಐ ಕಾರ್ಯಕರ್ತನ ಬಂಧನ
ವಿದ್ಯಾರ್ಥಿ ಕೊಲೆ ಪ್ರಕರಣ : ಪಿಎಫ್ಐ ಕಾರ್ಯಕರ್ತನ ಬಂಧನ
ಕಾಸರಗೋಡು, ಜುಲೈ 18 : ಕೇರಳದಲ್ಲಿ ಎಸ್ ಎಫ್ ಐ ವಿದ್ಯಾರ್ಥಿ ಅಭಿಮನ್ಯು ಕೊಲೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಮೊಹಮ್ಮದ್ ಅಲಿ (21) ಯನ್ನು ಕರ್ನಾಟಕ ಕೇರಳ ಗಡಿ ಪ್ರದೇಶದ ಮಂಜೇಶ್ವರದಲ್ಲಿ ಕೇರಳ ಪೊಲಿಸರ ವಿಶೇಷ ತಂಡ ಬಂಧಿಸಿದೆ.
ಮೊಹಮದ್ ಬಂಧನದಿಂದ ಬಂಧಿತರ ಸಂಖ್ಯೆ 5 ಕ್ಕೇರಿದೆ.
ಮೊಹಮ್ಮದ್ ಪಿಎಫ್ಐ ಸಂಘಟನೆಗೆ ಸೇರಿದ್ದು, ಪಿಎಫ್ಐ ಯ ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ ಸಂಚಾಲಕನಾಗಿದ್ದಾನೆ ಎಂದು ಕೇರಳ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೊಹಮ್ಮದ್ ಅಭಿಮನ್ಯುವಿನ ಕೊಲೆಯ ನಂತರ ಕರ್ನಾಟಕದ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಆಧಾರಿಸಿ ಅವನ ಫೋನ್ ಕರೆಗಳ ಮೇಲೆ ಮತ್ತು ಅವನ ಚಲನವಲನಗಳ ಮೇಲೆ ನಿಗಾ ಇರಿಸಿಕೊಂಡಿದ್ದರು.
ಬಂಧನದ ಬಳಿಕ ವಿಶೇಷ ತಂಡ ಮೊಹಮ್ಮದನನ್ನು ಹೆಚ್ಚಿನ ವಿಚಾರಣೆಗೆ ಎರ್ನಕುಳಂ ಗೆ ಕರೆದುಕೊಂಡು ಹೋಗಿದೆ.
ಜುಲೈ 2 ರಂದು ಎರ್ನಕುಳಂ ಮಹರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಅಭಿಮನ್ಯುವನ್ನು ಚೂರಿ ಇರಿದು ಕೊಲೆ ಮಾಡಲಾಗಿತ್ತು.
ಎಸ್ ಎಫ್ ಐ ಸಂಘಟನೆಯಲ್ಲಿ ಗುರುತ್ತಿಸಿಕೊಂಡಿದ್ದ ಅಭಿಮನ್ಯುವಿನ ಕೊಲೆಯ ಹಿಂದೆ ಆರ್ ಎಸ್ ಎಸ್ ನ ಕೈವಾಡದ ತಳಕು ಹಾಕಲಾಗಿತ್ತು.
ಈ ಕೊಲೆ ಕೇರಳಾದ್ಯಂತ ತೀವ್ರ ಸಂಚಲನವನ್ನುಂಟು ಮಾಡಿತ್ತು.