LATEST NEWS
ರಸ್ತೆಯಲ್ಲಿ ಸಿಲಿಂಡರ್ ರೀತಿ ಉರುಳಾಡುವ ಸಂಸದೆ ಎಲ್ಲಿ….? : ವಿನಯ್ ಕುಮಾರ್ ಸೊರಕೆ

ಉಡುಪಿ ಸೆಪ್ಟೆಂಬರ್ 13: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕಾಂಗ್ರೇಸ್ ಅವಧಿಯಲ್ಲಿ ಬೆಲೆ ಏರಿಕೆ ಮಾಡಿದಾಗ ರಸ್ತೆಯಲ್ಲಿ ಸಿಲಿಂಡರ್ ನಂತೆ ಉರುಳಾಡಿ ಪ್ರತಿಭಟನೆ ಮಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈಗೆಲ್ಲಿ ಎಂದು ಕಾಂಗ್ರೆಸ್ ನಾಯಕ ವಿನಯ್ ಕುಮಾರ್ ಸೊರಕೆ ಪ್ರಶ್ನೆ ಮಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಮೂವತ್ತು ರೂಪಾಯಿ ಪೆಟ್ರೋಲ್ ಕೊಡ್ತೇವೆ ಎಂದು ವಾಗ್ದಾನ ಮಾಡಿದ್ದರು. ಕ್ರೂಡ್ ಆಯಿಲ್ ದರ ಇಳಿಕೆಯಾದರೂ ಪೆಟ್ರೋಲ್ ದರ ಇಳಿಸಲಿಲ್ಲ ಎಂದರು.

ದೇಶ ಕಟ್ಟಬೇಕು- ದೇಶ ಉಳಿಯಬೇಕು- ಹಾಗಾಗಿ ಏನಾದರೂ ಸಹಿಸಿಕೊಳ್ಳಬೇಕು. 70 ವರ್ಷದಲ್ಲಿ ಮಾಡಿದ ಸರ್ಕಾರಿ ಸ್ವತ್ತು ಮಾರಾಟವಾದರೂ ಬಾಯಿ ಮುಚ್ಚಿ ಕೂರಬೇಕು. ವಿರೋಧ ಪಕ್ಷ ಏನು ಮಾಡಿದರೂ ದೇಶದ್ರೋಹ. ದೇಶ ಕಟ್ಟುವವರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್ ಮಾಡಿ. ಈ ಬಗ್ಗೆ ಮನವಿ ಕೊಟ್ಟರೂ ಸರ್ಕಾರ ಸ್ಪಂದಿಸಿಲ್ಲ. ಜನಸಾಮಾನ್ಯರಿಗೆ 100 ರೂ. ದೇಶಭಕ್ತರಿಗೆ 200 ರೂ. ಪೆಟ್ರೋಲ್ ಕೊಡಿ ಎಂದು ಸೊರಕೆ ಬೆಲೆ ಏರಿಕೆ ವಿರುದ್ಧ ವ್ಯಂಗ್ಯವಾಡಿದರು