Connect with us

LATEST NEWS

ಕಾರ್ಕಳ ಪ್ರಾರ್ಥನಾ ಮಂದಿರದ ಮೇಲೆ ದಾಳಿ – ರಾಜ್ಯದಲ್ಲಿ ಕಾನೂನು ಇಲ್ಲ ಎನ್ನುವುದಕ್ಕೆ ಉದಾಹರಣೆ

ಉಡುಪಿ ಸೆಪ್ಟೆಂಬರ್ 13: ಕಾರ್ಕಳ ಪ್ರಾರ್ಥನಾ ಮಂದಿರದ ಮೇಲೆ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ನಡೆಸಿರುವ ದಾಳಿಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಖಂಡಿಸಿದ್ದಾರೆ.


ಕಾರ್ಕಳದಲ್ಲಿ ನಡೆದಿರುವ ಈ ಘಟನೆ ರಾಜ್ಯದಲ್ಲಿ ಸರ್ಕಾರ ಇಲ್ಲ, ಕಾನೂನು ಇಲ್ಲ ಎಂಬುದಕ್ಕೆ ದೊಡ್ಡ ಉದಾಹರಣೆ ಎಂದ ಅವರು ಕಾನೂನು ಕೈಗೆತ್ತಿಕೊಳ್ಳುವ ಬದಲು, ಕಾನೂನು ಪ್ರಕಾರ ಮಾಡಬೇಕಿತ್ತು, ಕಾನೂನು ಉಲ್ಲಂಘನೆ ಆಗಿದ್ರೆ ಅದರ ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು ಎಂದರು.

ಕೇಂದ್ರ , ರಾಜ್ಯದಲ್ಲಿ ಇವರದ್ದೇ ಸರ್ಕಾರ ಇದೆ, ಉಸ್ತುವಾರಿ ಸಚಿವರು ಕೂಡ ಕಾರ್ಕಳದವರೇ , ಆದರೂ ಈ ರೀತಿಯಲ್ಲಿ ಏಕಾಏಕಿ ದಾಳಿ ಮಾಡುವುದು ಸರಿ ಅಲ್ಲ, ವಾಸ್ತವವಾಗಿ ಏನು ನಡೆದಿದೆ ಅಂತ ವಿಮರ್ಶೆ ಮಾಡಬೇಕು , ಪ್ರಾರ್ಥನೆ ಸೇರಿದ್ದಾರೆ ಅಂತ ಉಲ್ಲೇಖ ಆಗಿದೆ. ಎಲ್ಲ ಕಡೆ ರೀತಿ ಆದ್ರೆ, ಕಾನೂನು ಯಾತೆ, ಜಿಲ್ಲೆಗೆ ಉಸ್ತುವಾರಿ ಸಚಿವರು ಯಾಕೆ ಎಂದು ಪ್ರಶ್ನಿಸಿದರು.