Connect with us

    FILM

    ತಾಯಿ ಆಗುತ್ತಿರುವ ಬಾಲಿವುಡ್ ನಟಿ ಸೋನಂ​ ಕಪೂರ್…..!!

    ಮುಂಬೈ: ಬಾಲಿವುಡ್ ನ ಎವರ್ ಗ್ರಿನ್ ಸ್ಟಾರ್ ಅನಿಲ್ ಕಪೂರ್ ಅವರ ಮಗಳು ಬಾಲಿವುಡ್ ನಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಉದ್ಯಮಿ ಆನಂದ್​ ಅಹೂಜಾ ಅವರನ್ನು ಮದುವೆಯಾಗಿರುವ ನಟಿ ಸೋನಂ ಕಪೂರ್​ ಸಾಮಾಜಿಕ ಜಾಲತಾಣದಲ್ಲಿ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


    ಹೊಸ ಫೋಟೋಶೂಟ್​ ಮೂಲಕ ಈ ವಿಚಾರವನ್ನು ಅವರು ಅಧಿಕೃತ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋನಂ ಕಪೂರ್ ನಟಿಸಿದ್ದಾರೆ. 2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಗುತ್ತಿದೆ.


    ‘ನಾಲ್ಕು ಕೈಗಳು, ನಿನ್ನನ್ನು ಉತ್ತಮವಾಗಿ ಬೆಳೆಸಲು. ಎರಡು ಹೃದಯ, ಒಂದು ಕುಟುಂಬ, ನಿನಗೆ ಪ್ರೀತಿ ತೋರಲು. ನಿನ್ನನ್ನು ಸ್ವಾಗತಿಸಲು ನಾವು ಕಾಯುತ್ತಿದ್ದೇವೆ’ ಎಂದು ಸೋನಂ ಬರೆದುಕೊಂಡಿದ್ದಾರೆ. ಕಪ್ಪು-ಬಿಳುಪಿನ ಫೋಟೋ ಹಾಕಿದ್ದಾರೆ ಸೋನಂ., ಅವರ ಜತೆ ಪತಿ ಆನಂದ್​ ಅಹೂಜ ಕೂಡ ಇದ್ದಾರೆ. ಅವರ ಬೇಬಿ ಬಂಪ್​ ಫೋಟೋ ಗಮನ ಸೆಳೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply